ಅಕ್ರಮ ಮರಳು ಸಾಗಾಟ: ಲಾರಿ ವಶ
Update: 2017-02-13 22:08 IST
ಮಂಗಳೂರು, ಫೆ. 13: ಅಕ್ರಮ ಮರಳು ಹೇರಿಕೊಂಡು ಪಾಣೆಮಂಗಳೂರಿನಿಂದ ಶಕ್ತಿನಗರದತ್ತ ಬರುತ್ತಿದ್ದ ಲಾರಿಯೊಂದನ್ನು ಸೋಮವಾರ ಕಂಕನಾಡಿ ಠಾಣಾ ಪೊಲೀಸರು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿಯ ಶಬ್ಬೀರ್ (19) ಬಂಧಿತ ಆರೋಪಿ. ಈತ ತನ್ನ ತಂದೆಯ ಲಾರಿಯನ್ನು ಚಲಾಯಿಸಿಕೊಂಡು ಬಂದಿದ್ದು, ಲೈಸೆನ್ಸ್ ಕೂಡಾ ಹೊಂದಿರಲಿಲ್ಲ. ನಗರದ ಪಡೀಲ್ ಬಳಿ ಕಾರ್ಯಾಚರಣೆ ನಡೆಸಿದ ಕಂಕನಾಡಿ ಠಾಣಾ ಇನ್ಸ್‌ಪೆಕ್ಟರ್ ರವಿ ನಾಯ್ಕ್ ಅವರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.