ಬೈಕ್ ಕಳವು ಪ್ರಕರಣ ಬೇಧಿಸಿದ ಪಾಂಡೇಶ್ವರ ಪೊಲೀಸರು
Update: 2017-02-13 22:15 IST
ಮಂಗಳೂರು, ಫೆ. 13: ಬೈಕ್‌ಗಳ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪಾಂಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದು, ಆರೋಪಿಯಿಂದ 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಉಳ್ಳಾಲ ಒಂಭತ್ತುಕೆರೆಯ ನಿವಾಸಿ ಶಾಫಿ (22) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಶಾಮೀಲಾಗಿದ್ದು, ಇನ್ನಷ್ಟೇ ಬಂಧಿಸಬೇಕಿದೆ.
ಆರೋಪಿಗಳಿಬ್ಬರು ಜತೆಗೂಡಿ ಹಲವು ಬೈಕ್‌ಗಳನ್ನು ಕಳವು ಮಾಡಿದ್ದಾರೆಂದು ಆರೋಪಿಸಲಾಗಿದೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವೊಂದರಿಂದ ಸುಳಿವು ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ, ಪಿಎಸ್‌ಐ ಅನಂತ ಮುರ್ಡೇಶ್ವರ ಹಾಗೂ ಕ್ರೈಂ ವಿಭಾಗದ ಸಿಬಂದಿಗಳು ಭಾಗವಹಿಸಿದ್ದರು.