ಸಂದೇಶ ಯಾತ್ರೆಗೆ ಸ್ವಾಗತ ಸಮಾರಂಭ
ಮಂಗಳೂರು, ಫೆ. 13: ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮದ ಪ್ರಚಾರಾರ್ಥವಾಗಿ ಫೆಬ್ರವರಿ 8ರಂದು ಉಳ್ಳಾಲ ದರ್ಗಾ ಝಿಯಾರತ್‌ನೊಂದಿಗೆ ಪ್ರಾರಂಭಗೊಂಡ ಪ್ರಚಾರ ಜಾಥವು ಉಮರ್ ದಾರಿುಯವರ ನಾಯಕತ್ವದಲ್ಲಿ ಮೂಡಗೆರೆ, ಹಾಸನ, ಚಿಕ್ಕಮಂಗಳೂರು, ಉಪ್ಪಳ್ಳಿ ತಲುಪಿದಾಗ ಸುನ್ನೀ ಸಂದೇಶ ಅಭಿಮಾನಿಗಳು ಸಮಸ್ತ ಕಾರ್ಯಕರ್ತರು ಸ್ವಾಗತ ನೀಡಿದರು.
ರವಿವಾರ ಚಾರ್ಮಾಡಿ, ಉಜಿರೆ, ಬೆಳ್ತಂಗಡಿ, ಕಕ್ಕಿಂಜೆ, ಪೂಜಂಲ್‌ಕಟ್ಟೆ, ಅಳಕೆ, ಕರಾಯ, ಉಪ್ಪಿನಂಗಡಿ, ಹಾತೂರು, ಕುಂತೂರು, ಮರ್ದಾಳ, ಕಡಬ, ಬಳ್ಳಾರೆ ಮೊಲಾದೆಡೆಯಲ್ಲಿ ಬಹಳ ಸ್ವಾಗತಿಸಲಾಯಿತು. ಸೋಮವಾರ ಸುಳ್ಯ, ಅರಂತೋಡು, ಅಜ್ಜಾವರ, ಜಾಲ್ಸೂರು, ಕುಂಬ್ರ, ಪಿಂಗಲಾಡಿ, ಸಂಪ್ಯ, ಪುತ್ತೂರು, ಕೂರ್ನಡ್ಕ, ಪರ್ಲಡ್ಕ, ಬಪ್ಪಳಿಗೆ, ಸಾಲ್ಮರ, ಕಲ್ಲೇಗ ಮೊದಲಾದ ಕಡೆಗಳಲ್ಲಿ ಪ್ರಚಾರ ಸಂದೇಶ ಯಾತ್ರೆಯ ವಾಹನ ಹಾಗೂ ಕಾರ್ಯಕರ್ತರು ತಲುಪಿದಾಗ ಸ್ವಾಗತಿಸಿದರು.
ಸೋಮವಾರ ನಡೆದ ಸಮಾರೋಪ ಸಮಾರಂಭ ಕುಕ್ಕಾಜೆಯಲ್ಲಿ ನಡೆಯಿತು. ಜಾಥಾ ನಾಯಕರಾದ ಕೆ. ಎಸ್. ಹೈದರ್‌ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ಧೀಕ್ ಫೈಝಿ, ಮುಸ್ತಫಾ ಫೈಝಿ, ಇಕ್ಬಾಲ್ ಬಾಳಿಲ, ನೌಶಾದ್ ಹಾಜಿ, ಸಿತಾರ್ ಮಜೀದ್ ಹಾಜಿ, ಅಬ್ದುಲ್ಲಾ ಹಾಜಿ ಟಿ. ಎಂ. ಶಹೀದ್ ಸುಳ್ಯ, ಅಡ್ವಕೇಟ್ ಹನೀಫ್ ಉದವಿ ದೇಲಂಬಾಡಿ, ನೂರುಲ್‌ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಬುಸ್ರ ಅಬ್ದುಲ್ ಅಝೀಝ್ ಹಾಜಿ, ರಶೀದ್ ಹಾಜಿ ಪರ್ಲಡ್ಕ, ಮುಹಮ್ಮದ್ ದಾರಿಮಿ, ಹುಸೈನ್ ದಾರಿಮಿ, ಎಸ್ಕೆಎಸೆಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಹನೀಫ್ ಕೌಸರಿ, ಹಮೀದ್ ದಾರಿಮಿ ಸಂಪ್ಯ ಹಾಗೂ ಊರಿನ ಉಲಮಾ ಉಮರ ನಾಯಕರು, ಸಮಸ್ತದ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಮುಸ್ತಫಾ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.