ಮೂಡುಬಿದಿರೆಯಲ್ಲಿ ಸುಳಿಯ ರುಧ್ರ ನರ್ತನ

Update: 2017-02-13 17:16 GMT

ಮೂಡುಬಿದಿರೆ,ಫೆ.13 : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ 2 ನಿಮಿಷಗಳ ಕಾಲ ಸುಳಿಯೊಂದು ಸಂಚರಿಸಿ ರುಧ್ರ ನರ್ತನಗೈಯಿತು. ಮೈದಾನದಲ್ಲಿ ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್‌ನಿಂದ ಟೂರ್ನಮೆಂಟನ್ನು ಆಯೋಜಿಸಲಾಗಿತ್ತು. ಈ ಸುಳಿಗೆ ಹೆದರಿ ಸ್ಥಳದಲ್ಲಿದ್ದ ವಾಹನಗಳನ್ನು ಪಾರ್ಕ್ ಮಾಡಿದ್ದವರು ತಕ್ಷಣ ಗಡಿಬಿಡಿಯಲ್ಲಿ ಚಲಾಯಿಸಿಕೊಂಡು ದೂರಕ್ಕೆ ತೆರಳಿದರು.

ಕ್ಷಣಗಳ ಮಟ್ಟಿಗಂತೂ ಕ್ರಿಕೆಟ್ ಆಟಗಾರರು ಹಾಗೂ ವೀಕ್ಷಕರು ಗಾಬರಿಗೊಳಗಾದರಾದರೂ ಎರಡು ನಿಮಿಷಗಳ ತರುವಾಯ ಆ ಸುಳಿಯ ಆಗಸಕ್ಕೇರಿ ಮರೆಯಾಯಿತು. ಧೂಳಿನಿಂದ ಪೂರ್ತಿ ತುಂಬಿದ್ದ ಸುಳಿಯು ಭೀಕರವಾಗಿ ಕಂಡುಬರುತ್ತಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News