ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷರಾಗಿ ಪಿ.ವಿ.ಶುಹೈಬ್ ಆಯ್ಕೆ
ಮಂಗಳೂರು,ಫೆ.13 : 'ಅನ್ಯಾಯವು ಕಾನೂನಾದಾಗ ನ್ಯಾಯದ ಪರವಾಗಿರಿ' ಎಂಬ ಪರಿಕಲ್ಪನೆಯೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರತಿನಿಧಿ ಸಭೆಯು ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಜರುಗಿತು. ಪ್ರತಿ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ನಾಯಕರನ್ನು ಚುಣಾಯಿಸುವ ಪ್ರತಿನಿಧಿ ಸಭೆಯಲ್ಲಿ ದೇಶದಾದ್ಯಂತ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಅಧ್ಯಕ್ಷರಾದ ಪಿ ಅಬ್ದುಲ್ ನಾಸರ್‌ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯನ್ನು ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾದ ಕೆ ಎಂ ಶರೀಫ್ ಉದ್ಘಾಟಿಸಿದರು. ಕಳೆದ ಸಾಲಿನ ವರದಿಯನ್ನು ಮಂಡಿಸಿ ಚರ್ಚೆ ನಡೆದು ಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ ನಡೆದ ಚುಣಾವಣಾ ಪ್ರಕ್ರಿಯೆಯಲ್ಲಿ ಜಾಮೀಯ ಮಿಲ್ಲೀಯಾ ಇಸ್ಲಾಮೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪಿ.ವಿ.ಶುಹೈಬ್ ನೂತನ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದರು. ಕೇರಳದ ಟಿ ಅಬ್ದುಲ್ ನಾಸರ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರೆ ಕರ್ನಾಟಕದ ಮುಹಮ್ಮದ್ ತುಫೈಲ್ ಮತ್ತು ರಾಜಸ್ತಾನದ ಆತಿಯಾ ಫಿರ್ದೌಸ್ ಉಪಾಧ್ಯಕ್ಷರಾಗಿ ಚುಣಾಯಿತರಾದರು, ಕಾರ್ಯದರ್ಶಿಗಳಾಗಿ ಟಿ.ಸಿ ನಿಬ್ರಾಸ್, ಮುಹಮ್ಮದ್ ಮುಸ್ತಫಾ ತಮಿಳುನಾಡು ಹಾಗು ಕೋಶಾಧಿಕಾರಿಯಾಗಿ ಜೆಎನ್‌ಯು ವಿದ್ಯಾರ್ಥಿ ಎಂ.ಎಸ್ ಸಾಜಿದ್ ಆಯ್ಕೆಯಾದರು.
ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಅಬ್ದುಲ್ ನಾಸರ್ ದೆಹಲಿ, ನೂರಾ.ಕೆ, ಸಿ.ಎ ರವೂಫ್ ಕೇರಳ, ಪಿ. ಇಶಾಂ ಹೈದರಾಬಾದ್, ಮುಹಮ್ಮದ್ ಶಫೀಕ್, ನೈನಾರ್ ಸುಲ್ತಾನ್ ತಮಿಳುನಾಡು, ಮುಹಮ್ಮದ್ ತಬಾರಕ್, ಮುಹಮ್ಮದ್ ವಸೀಂ ಕರ್ನಾಟಕ, ಇಸ್ಹಾಕ್ ಮಣಿಪುರ, ಎಂ.ಬಿ ಶಫ್ಫೀನ್ ಆಯ್ಕೆಯಾದರು.
(ಟಿ ಅಬ್ದುಲ್ ನಾಸರ್)