×
Ad

ನ್ಯಾ. ಅಶ್ವತ್ಥ್ ನಾರಾಯಣ್ ಮುಂದೆ ಶರಣಾಗಲಿರುವ ಶಶಿಕಲಾ

Update: 2017-02-14 14:29 IST

ಚೆನ್ನೈ, ಫೆ.14:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಎಐಎಡಿಎಂಕೆ ಅಧಿನಾಯಕಿ  ಶಶಿಕಲಾ ಪರಪ್ಪನ ಅಗ್ರಹಾರ  ಜೈಲಿಗೆ ತೆರಳುವ ಮುನ್ನ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ನ್ಯಾ. ಅಶ್ವತ್ಥ್ ನಾರಾಯಣ್ ಮುಂದೆ ಶರಣಾಗಬೇಕಿದೆ. ಸೇಷನ್ಸ್ ನ್ಯಾಯಾಧೀಶ  ಅಶ್ವತ್ಥ್ ನಾರಾಯಣ್ ಅವರು ವಿಶೇಷ ನ್ಯಾಯಾಲಯದ  ಉಸ್ತುವಾರಿ ನ್ಯಾಯಾಧೀಶರಾಗಿದ್ದಾರೆ.

ಎಐಎಡಿಎಂಕೆ ಅಧಿನಾಯಕಿ  ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ್ದರೂ, ಅವರು ವಿಶೇಷ ನ್ಯಾಯಾಲಯದ ಮುಂದೆ ಶರಣಾಗತಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಶಶಿಕಲಾ ಪರ ವಕೀಲರು ನ್ಯಾಯಾಲಯದ ಮೊರೆ  ಹೋಗಿ ಶಶಿಕಲಾ ಅವರಿಗೆ ಶರಣಾಗಲು ಕಾಲಾವಕಾಶ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟಿರುವ ಮೂವರು ಪರಪ್ಪನ ಅಗ್ರಹಾರ ಜೈಲಿಗೆ ತೆರಳುವ ಮೊದಲು ವಿಶೇಷ ನ್ಯಾಯಾಲಯದ ಮುಂದೆ ಶರಣಾಗಬೇಕಿದೆ.ಆದರೆ   ಪ್ರಸ್ತುತ ವಿಶೇಷ ನ್ಯಾಯಾಧೀಶ ಸ್ಥಾನ  ಖಾಲಿ ಇದೆ. ಈ ಹಿಂದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ನ್ಯಾ. ಮೈಕಲ್ ಕುನ್ಹಾ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಖಾಲಿಯಾದ ಸ್ಥಾನಕ್ಕೆ ನ್ಯಾಯಾಧೀಶರ ನೇಮಕ ನಡೆದಿಲ್ಲ.  ಈ ಕಾರಣದಿಂದಾಗಿ ಸೇಷನ್ಸ್ ನ್ಯಾಯಾಧೀಶ  ಅಶ್ವತ್ಥ್ ನಾರಾಯಣ್ ಅವರು ವಿಶೇಷ ನ್ಯಾಯಾಲಯದ  ಉಸ್ತುವಾರಿ ನ್ಯಾಯಾಧೀಶರಾಗಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News