×
Ad

ಈ ವರ್ಷದ ಬಹು ನಿರೀಕ್ಷಿತ ಬಿಡುಗಡೆ : ನೋಕಿಯಾ 3310 !

Update: 2017-02-14 16:04 IST

ಹೊಸದಿಲ್ಲಿ, ಫೆ.14: ನೋಕಿಯಾ ತನ್ನಬಹು ಜನಪ್ರಿಯ 3310 ಮಾಡೆಲ್ ಮೊಬೈಲ್ ಫೋನ್ ಅನ್ನು ಬಾರ್ಸಿಲೋನಾದಲ್ಲಿ ಫೆಬ್ರವರಿ 26ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ಸಿನಲ್ಲಿ ಮರು ಬಿಡುಗಡೆ ಮಾಡಲಿದೆ. ‘‘ದಿ ಇಮ್ಮೂವೇಬಲ್ ಆಬ್ಜೆಕ್ಟ್’ ಹಾಗೂ ‘ದಿ ಇನ್ ಡಿಸ್ಟ್ರಕ್ಟಿಬಲ್’ ಎಂಬ ಅಡ್ಡ ಹೆಸರು ಪಡೆದಿರುವ ಈ ಫೊನ್‌ಹೊಸ ಪ್ಯಾಕೇಜಿನಲ್ಲಿ ಮತ್ತೆ ಬಿಡುಗಡೆಯಾಗಲಿದೆ.

ನೋಕಿಯಾ ಮತ್ತು ಎಚ್‌ಎಂಡಿ ಗ್ಲೋಬಲ್ ಜತೆಯಾಗಿ ಆಯೋಜಿಸುವ ಈ ಸಮಾರಂಭದಲ್ಲಿ ನೋಕಿಯಾ ಒಟ್ಟು ನಾಲ್ಕು ಫೋನುಗಳನ್ನು ಬಿಡುಗಡೆ ಮಾಡಲಿದೆ. ಮತ್ತೆ ಬಿಡುಗಡೆಗೊಳ್ಳಲಿರುವ 3310 ಫೋನಿನ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ ಅದರ ಬೆಲೆ 59 ಪೌಂಡ್ ಎಂದು ತಿಳಿದು ಬಂದಿದೆ. ಮೂಲತಃ 2000ರಲ್ಲಿ ಮೊದಲು ಬಿಡುಗಡೆಯಾದ ಈ ಫೋನ್ ತನ್ನದೀರ್ಘ ಬ್ಯಾಟರಿ ಬಾಳಿಕೆಗೆ ಹೆಸರಾಗಿತ್ತಲ್ಲದೆ ಗಟ್ಟಿಮುಟ್ಟಾದ ಫೋನ್ ಎಂದೂ ಖ್ಯಾತಿವೆತ್ತಿತ್ತು.
ಈ ಫೋನ್ ಹೊರತಾಗಿ ಸಮಾರಂಭದಲ್ಲಿ ಎಚ್‌ಎಂಡಿ ಗ್ಲೋಬಲ್ ಸಂಸ್ಥೆ ನೋಕಿಯಾ 3,5,6 ಅನ್ನೂ ಬಿಡುಗಡೆಗೊಳಿಸಿದೆ. ನೋಕಿಯಾ 6 ಚೀನಾದಲ್ಲಿ ಕಳೆದ ತಿಂಗಳು ಬಿಡುಗಡೆಗೊಂಡಿದ್ದು5.5 ಇಂಚು ಡಿಸ್ಪ್ಲೇ ಇರುವ ಈ ಫೋನ್‌ಖ್ವಾಲ್ ಕಾಮ್ ಸ್ನ್ಯಾಪ್ ಡ್ರಾಗನ್430 ಚಿಪ್ ಹಾಗೂ 4 ಜಿಬಿ ರ್ಯಾಮ್ ಹೊಂದಿದೆ. 16 ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮರಾ ಹಾಗೂ 8 ಮೆಗಾ ಪಿಕ್ಸೆಲ್‌ಫ್ರಂಟ್ ಕ್ಯಾಮೆರಾ ಹೊಂದಿರುವ ಈ ಫೋನಿನ ಬ್ಯಾಟರಿ ಸಾಮರ್ಥ್ಯ 3000 ಎಂಎಎಚ್ ಆಗಿದೆ.
ನೋಕಿಯಾ 5 ಫೋನಿಗೆ 5.2 ಇಂಚು ಡಿಸ್ಪ್ಲೇ ಇದ್ದು ಅದರಲ್ಲಿ 2 ಜಿಬ್ ರ್ಯಾಮ್ ಹಾಗೂನೋಕಿಯಾ 6 ಮಾದರಿಯ ಪ್ರೊಸೆಸರ್ ಇದೆಯೆಂದು ಹೇಳಲಾಗುತ್ತಿದೆ.
ನೋಕಿಯಾ 5 ಫೋನಿನ ಬೆಲೆ 149 ಪೌಂಡ್‌ಆಗಿದ್ದರೆ, ನೋಕಿಯಾ 6 ಬೆಲೆ 209 ಪೌಂಡ್ ಆಗಿರಬಹುದೆಂದು ಅಂದಾಜಿಸಲಾಗಿದೆ. ನೋಕಿಯಾ 3 ಫೋನಿನ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News