ಫೆ.16: ಅಂತಾರಾಷ್ಟ್ರೀಯ ‘ಚೈಲ್ಡ್‌ವುಡ್ ಕ್ಯಾನ್ಸರ್ ಡೇ’
Update: 2017-02-14 16:13 IST
ಮಂಗಳೂರು, ಫೆ.14: ಅತ್ತಾವರ ಕಸೂರ್ಬಾ ಮೆಡಿಕಲ್ ಕಾಲೇಜು ತನ್ನ 25ರ ಸಂಭ್ರಮಾಚರಣೆಯ ಪ್ರಯುಕ್ತ ಫೆ.16ರಂದು ಇಂಟರ್‌ನ್ಯಾಷನಲ್ ಚೈಲ್ಡ್‌ವುಡ್ ಕ್ಯಾನ್ಸರ್ ಡೇ ಕಾರ್ಯಕ್ರಮವನ್ನು ಆಸ್ಪತ್ರೆಯ ಸಂಜೀವಿನಿ ಹಾಲ್‌ನಲ್ಲಿ ಹಮ್ಮಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಹರ್ಷ ಪ್ರಸಾದ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಹಾಗೂ ಕ್ಯಾನ್ಸರ್‌ನಿಂದ ಗೆದ್ದು ಬರುವ ಮಕ್ಕಳಿಗೆ ಜೀವನೋತ್ಸವ ತುಂಬಿಸುವ ಪ್ರಯತ್ನ ಮಾಡಲಾಗುವುದು. ಈ ಮೂಲಕ ಕ್ಯಾನ್ಸರ್ ಹೋರಾಟದ ಬದುಕಿಗೆ ಒಂದು ಹೊಸ ಅರ್ಥ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ಸಂದರ್ಭ ಡಾ. ಕಮಾಲಾಕ್ಷ ಭಟ್, ಡಾ. ಸಂತೋಷ್ ರಾಜ್, ಡಾ. ಪ್ರಹ್ಲಾದ್ ಕುಷ್ಟಗಿ ಉಪಸ್ಥಿತರಿದ್ದರು.