ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆರಂಭ
ಸುಳ್ಯ,ಫೆ.14: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆರಂಗೊಂಡಿದ್ದು, ಹಸಿರುವಾಣಿ ಮೆರವಣಿಗೆ ನಡೆಯಿತು.
ಪೂರ್ವಾಹ್ನ 10 ಗಂಟೆಗೆ ಹಸಿರುವಾಣಿ ಮೆರವಣಿಗೆಯು ನಾಲ್ಕು ಕಡೆಗಳಿಂದ ಏಕಕಾಲದಲ್ಲಿ ಹೊರಟು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರ, ಪೇರಾಲು ಅಂಬ್ರೋಟಿಯ ಶ್ರೀ ರಾಮಭಜನಾ ಮಂದಿರ ಹಾಗೂ ಸುಳ್ಯದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದಿಂದ ಹೊರಟು ದೇವಸ್ಥಾನಕ್ಕೆ ಸಾಗಿ ಬಂದಿತು.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಮೆರವಣಿಗೆಯು ವಿನೋಬನಗರದ ದ್ವಾರದ ಬಳಿ ಒಟ್ಟಾಗಿ ದೇವಸ್ಥಾನಕ್ಕೆ ಬಂದರೆ ಪೇರಾಲು-ಅಂಬ್ರೋಟಿಯಿಂದ ಬಂದ ಹಸಿರುವಾಣಿಯು ದೇವಸ್ಥಾನಕ್ಕೆ ನೇರವಾಗಿ ಸಾಗಿ ಬಂದಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ವ್ಯವಸ್ಥಾಪನ ಸಮಿತಿ, ವಿವಿಧ ಬೈಲುವಾರು ಸಮಿತಿ, ಮಹಿಳಾ ಸಮಿತಿ ಹಾಗೂ ಎಲ್ಲಾ ಉಪ ಸಮಿತಿಯ ಪದಾಧಿಕಾರಿಗಳು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಸಂಯೋಜಕ ನ.ಸೀತಾರಾಮ ಅರಿಯಡ್ಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ಪ್ರದಾನ ಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಮುರಳೀಧರ ಅಡ್ಕಾರು, ಕೋಶಾಧ್ಯಕ್ಷ ದಿನೇಶ್ ಅಡ್ಕಾರು, ಮಾದ್ಯಮ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಸುದ್ದಿ ಸಿಬ್ಬಂದಿಗಳಾದ ರಮೇಶ್ ನೀರಬಿದಿರೆ,ಶ್ರೀಧರ ಕಜೆಗದ್ದೆ, ವಿನಯ್ ಜಾಲ್ಸೂರು, ಯಶ್ವಿತ್ ಕಾಳಮನೆ, ಶಿವಪ್ರಸಾದ್ ಕೇರ್ಪಳ, ಕುಶಾಂತ್ ಕೊರತ್ಯಡ್ಕ, ರಂಜಿತ್ ನಳಿಯಾರು, ವಿನಯ್ ಕಲ್ಮಡ್ಕ ಉಪಸ್ಥಿತರಿದ್ದರು.