ತಾಝಿಕ್ಕೋಡ್ ಉಸ್ತಾದರಿಗೆ ಗೌರವಾರ್ಪಣೆ
ಉಳ್ಳಾಲ, ಫೆ.14: ಆರು ದಶಕಗಳ ಕಾಲ ತಾಜುಲ್ ಉಲಮಾರೊಂದಿಗೆ ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ, ತಾಜುಲ್ ಉಲಮಾ ನಿಧನದ ಬಳಿಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸಾವಿರಾರು ಮದನಿ ವಿದ್ವಾಂಸರನ್ನು ಸಮಾಜಕ್ಕೆ ಅರ್ಪಿಸಿದ ಮತಪಂಡಿತ ತಾಝಿಕ್ಕೋಡ್ ಉಸ್ತಾದರಿಗೆ ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ವತಿಯಿಂದ ಕೇರಳದ ತಾಝಿಕ್ಕೋಡ್ ಎಂಬಲ್ಲಿ ಗೌರವ ಅರ್ಪಿಸಲಾಯಿತು. ಶೈಖುನಾ ತಾಝಿಕ್ಕೋಡ್ ಉಸ್ತಾದ್ ದುಆಕ್ಕೆ ನೇತೃತ್ವ ನೀಡಿದರು. ಮದನೀಸ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ನೆಕ್ಕಿಲಾಡಿ ಅಲ್‌ಹಾಜ್ ಇಸ್ಮಾಯೀಲ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಅಬ್ದುಸ್ಸಲಾಂ ತಂಙಳ್ ಉದ್ಛಾಟಿಸಿದರು.
ವೇದಿಕೆಯಲ್ಲಿ ಪಿ.ಕೆ.ಮುಹಮ್ಮದ್ ಮದನಿ, ಸಾಮಣಿಗೆ ಮದನಿ, ಪಳ್ಳಿತ್ತಡ್ಕ ಅಬ್ದುಲ್ ಖಾದಿರ್ ಮದನಿ, ಸೆರ್ಕಳ ಅಲಿ ಮದನಿ, ಮರ್ಸಿನ್ ಮುಹಮ್ಮದ್ ಮದನಿ, ದಾರುಲ್ ಇಝ್ಝ ಸಿನಾನ್ ಮದನಿ, ಎನ್.ಡಿ. ಅಬೂಬಕರ್ ಮದನಿ, ಡಿ.ಎಸ್. ಅಬ್ದುರ್ರಹ್ಮಾನ್ ಮದನಿ, ನಾಸಿರ್ ಮದನಿ ಕಾಟಿಪಳ್ಳ, ಇಸ್ಮಾಯೀಲ್ ಮದನಿ ಕೊಯ್ಯೂರು, ಹೈದರ್ ಮದನಿ ಸೂರಿಂಜೆ, ಉಮರ್ ಮದನಿ ಪೊಯ್ಯತ್ತಬೈಲ್, ಖಾಲಿದ್ ಮದನಿ ಕಲ್ಮಿಂಜೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜೆಪ್ಪುಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ಕೆ.ಎಂ.ಮದನಿ ಕಟ್ಟತ್ತಿಲ ವಂದಿಸಿದರು. ಆಲಂಪಾಡಿ ಅಕ್ಬರ್ ಅಲಿ ಮದನಿ ಕಾರ್ಯಕ್ರಮ ನಿರೂಪಿಸಿದರು.