×
Ad

ಬೈಕ್ - ಬಸ್ ಢಿಕ್ಕಿ : ಯುವಕ ಸ್ಥಳದಲ್ಲೇ ಸಾವು

Update: 2017-02-14 20:08 IST

ಮೂಡುಬಿದಿರೆ,ಫೆ.12 : ಬೈಕ್ ಅಪಘಾತಗೊಂಡು ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡುಬಿದಿರೆಯ ಬಳ್ಳಾಲ್ ಹೊಟೇಲ್ ಎದುರು ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಮೂಡುಬಿದಿರೆಯ ಇರುವೈಲು ರಸ್ತೆಯಲ್ಲಿರುವ ಹೊಟೇಲ್ ಫುಡ್‌ಲ್ಯಾಂಡ್‌ನ ಮಾಲಕ ಮಹಾಬಲ ಎಂಬವರ ಪುತ್ರ ಸಂದೀಪ್ ಶೆಟ್ಟಿ (21) ಮೃತಪಟ್ಟವರು. ಸಂದೀಪ್ ಶೆಟ್ಟಿ ಮೂಡುಬಿದಿರೆಯಲ್ಲಿ ವಯರಿಂಗ್ ಕೆಲಸ ನಿರ್ವಹಿಸುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಬಳ್ಳಾಲ್ ಹೊಟೇಲ್‌ನಲ್ಲಿ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ತನ್ನ ಸ್ನೇಹಿತನನ್ನು ಗಾಂಧಿನಗರದ ಬಳಿಯಿರುವ ಗ್ಯಾರೇಜ್ ಒಂದಕ್ಕೆ ಬಿಟ್ಟುಬರುವ ವಾಪಾಸು ಬರುವ ವೇಳೆ ಮೂಡುಬಿದಿರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (ಜಯರಾಜ್ ಬಳ್ಳಾಲ್)ಗೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ತಕ್ಷಣವೇ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಬದುಕಿಸುವ ಪ್ರಯತ್ನ ಫಲಕಾರಿಯಾಗಲಿಲ್ಲ. ಸಂದೀಪ್ ಶೆಟ್ಟಿ ಖ್ಯಾತ ಯಕ್ಷಗಾನ ಕಲಾವಿದ ಲಾಡಿ ಕೃಷ್ಣ ಶೆಟ್ಟಿಯವರ ಮೊಮ್ಮಗ. ಮಹಾಬಲ ಅವರ ಇಬ್ಬರು ಮಕ್ಕಳಲ್ಲಿ ಮೊದಲನೆಯವ. ಮೂಡುಬಿದಿರೆಯ ಎ.ಜೆ. ಸೋನ್ಸ್ ಐಟಿಐನಲ್ಲಿ ಐಟಿಐ ಮುಗಿಸಿದ್ದ ಈತ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಎಂದು ತಿಳಿದುಬಂದಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News