ಪಿ.ಎ.ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನ
ಕೊಣಾಜೆ,ಫೆ.14: ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೋಸ್ಟರ್, ಉಪನ್ಯಾಸ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮದ ಮೂಲಕ ನಡೆಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿಭಾಗವಹಿಸಿದ ಮಂಗಳೂರು ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ ಒಲಿವರ್ ಡಿಸೋಜ ಇವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಶರೀಫ್‌ರವರು ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು.
ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಸರ್ಫಾರ್ ಹಾಶಿಂ ಜೆ., ಎಂ.ಬಿ.ಎ. ವಿಭಾಗದ ನಿರ್ದೇಶಕರಾದ ಡಾ. ಬೀರಾನ್ ಮೊದೀನ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ ಪಾಲಕ್ಷಪ್ಪ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ಪ್ರೊ. ಮುಸ್ತಾಫ ಖಲೀಲ್ ಮತ್ತು ಪೊ. ಮನ್ಸೂರ್, ಅಭಿಯಾನ ಸಂಯೋಜಕರಾದ ಪ್ರೊ. ನಬೀಲ್ ಮತ್ತು ಪ್ರೊ. ಸಯ್ಯದ್ ಅಮೀನ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ನಾಯಕ ಶಫಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಮಿಖ್ದಾದ್, ಖಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ವಿದ್ಯಾರ್ಥಿಗಳಾದ ಕು ಹಫ್ಸಾ ಸ್ವಾಗತಿಸಿ, ರಝಾಕ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ಅಫೀಫ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುವ ವಿಧಾನವು ವಿನೂತನವಾಗಿತ್ತು. ಹಣದ ಬದಲಾಗಿ ಹಳೇ ಕಾಗದ ಮತ್ತು ಪತ್ರಿಕೆಗಳನ್ನು ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದಿಂದ ಒಟ್ಟು 3,500 ಕೆ.ಜಿ. ಯಷ್ಟು ಹಳೆ ಪತ್ರಿಕೆಗಳನ್ನು ಸಂಗ್ರಹಿಸಿ ಇದರಿಂದ ಬಂದ ಹಣವನ್ನು ದೇಣಿಗೆ ನಿಧಿಗೆ ನೀಡಲಾಯಿತು. ಈ ಅಭಿಯಾನದ ಕೊನೆಯಲ್ಲಿ ಪ್ರಿವೆಂಟಿವ್ ಕ್ಯಾನ್ಸರ್ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.