ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯಿಂದ ಮಹಾತ್ಮರ ಅನುಸ್ಮರಣೆ ಹಾಗೂ ಅಭಿನಂದನಾ ಕಾರ್ಯಕ್ರಮ
ಕೊಣಾಜೆ,ಫೆ.14: ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ವತಿಯಿಂದ ಮಹಾತ್ಮರ ಅನುಸ್ಮರಣೆ, ಅಸ್ಸುಫ್ಫ ತರಗತಿ ಉದ್ಘಾಟನೆ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ರವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮವು ಶಾಖಾ ಅಧ್ಯಕ್ಷ ಮನ್ಸೂರು ಹಿಮಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಶಾಖೆಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಲತೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಹಾಗೂ ಮರಿಕ್ಕಳ ಶಾಖಾ ಅಧ್ಯಕ್ಷ ಮನ್ಸೂರು ಹಿಮಮಿಸಂಘಟನಾ ತರಗತಿಯನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಉಪಾಧ್ಯಕ್ಷ ಇಬ್ರಾಹಿಂ ಮದನಿ ನಿಡ್‌ಮಾಡ್, ಮರಿಕ್ಕಳ ಜಮಾಅತ್ ಪ್ರ.ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ಲು, ಅಬ್ದುಲ್ ಖಾದರ್ ಕಟ್ಟಪುಣಿ, ಮರಿಕ್ಕಳ ಬ್ರಾಂಚ್ ಎಸ್.ವೈ.ಎಸ್ ಅಧ್ಯಕ್ಷ ಅಲಿಕುಂಞಿ ಮೊಂಟುಗೋಳಿ, ಮೊಂಟುಗೋಳಿ ಸೆಕ್ಟರ್ ಪ್ರ.ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಜೊತೆ ಕಾರ್ಯದರ್ಶಿ ಸಂಶುದ್ದೀನ್ ಮೊಂಟೆಪದವು, ಸಕ್ಟರ್ ನಾಯಕರಾದ ಸಿನಾನ್ ಸುಟ್ಟ, ಸಿರಾಜ್ ನಿಡ್‌ಮಾಡ್ ಹಾಗೂ ಮರಿಕ್ಕಳ ಶಾಖೆಯ ನಾಯಕರುಗಳಾದ ಅಬ್ಬಾಸ್ ನಿಡ್‌ಮಾಡ್, ನೌಫಲ್ ಮೊಂಟುಗೋಳಿ, ಸಿದ್ದೀಕ್ ದೊಡ್ಡಮನೆ, ಅಲಿ ಮಜಲು, ಶಾಕಿರ್ ಚಂದಹಿತ್ಲು, ಅಶ್ರಫ್ ಮಜಲು, ಶಫೀಕ್ ಮೊಂಟುಗೋಳಿ ಉಪಸ್ಥಿತರಿದ್ದರು. ಶಾಖೆಯ ಪ್ರ.ಕಾರ್ಯದರ್ಶಿ ಅಝರ್ ಸ್ವಾಗತಿಸಿ, ಕೊನೆಗೆ ಇಬ್ರಾಹಿಂ ಪೂಡಲ್ ವಂದಿಸಿದರು.