×
Ad

ಶಶಿಕಲಾ ಬೆಂಬಲಿಗರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಯತ್ನ

Update: 2017-02-14 21:39 IST

 ಚೆನ್ನೈ, ಫೆ.14: ಗೋಲ್ಡನ್‌ ಬೇ ರೆಸಾರ್ಟ್‌ ಬಳಿ ಮಾಧ್ಯಮ ಪ್ರತಿನಿಧಿಗಳ ಬಳಿ ಶಶಿಕಲಾ ನಟರಾಜನ್‌ ಬೆಂಬಲಿಗರು ಹಲ್ಲೆಗೆ ಯತ್ನ ನಡೆಸಿದ ಘಟನೆ  ನಡೆದಿದೆ.
ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರು ಕಾಂಚಿಪುರಂ ಕೂವತ್ತೂರಿನ  ಗೋಲ್ಡನ್‌ ಬೇ ರೆಸಾರ್ಟ್‌ ನಲ್ಲಿ ಶಾಸಕರ ಸಭೆ ನಡೆಸುತ್ತಿರುವುದನ್ನು ವರದಿ ಮಾಡಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಶಶಿಕಲಾ ಬೆಂಬಲಿಗರು ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ. ಪತ್ರಿಕಾಗೋಷ್ಠಿಗೆ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳು  ರೆಸಾರ್ಟ್‌ ಪ್ರವೇಶಿಸುವ ವೇಳೆ ಅವರಿಂದ ಶಶಿಕಲಾ ಬೆಂಬಲಿಗರು ಲೋಗೊ ಕಸಿದುಕೊಂಡರೆನ್ನಲಾಗಿದೆ.  ಕ್ಯಾಮರಾಮ್ಯಾನ್‌ಗಳನ್ನು ಮಾತ್ರ ಒಳಪ್ರವೇಶಿಸಲು ಅವಕಾಶ ನೀಡಿದ ಶಶಿಕಲಾ ಬೆಂಬಲಿಗರು ವರದಿಗಾರರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆನ್ನಲಾಗಿದೆ. ಇದನ್ನು ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳು ಧರಣಿ ನಡೆಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News