×
Ad

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Update: 2017-02-14 21:46 IST

ಮಂಗಳೂರು, ಫೆ. 14: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನ್ಯಾಯಲಯೆಕ್ಕ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ವೀರಕಂಭ ನಿವಾಸಿ ರಘುನಾಥ (40) ಬಂಧಿತ ಆರೋಪಿ. 2007ರಲ್ಲಿ ನಡೆದ ಸ್ಯಾಂಟ್ರೋ ಕಾರು ಕಳವು ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಈತನ ಮೇಲೆ ಬದಿಯಡ್ಕ, ವಿಟ್ಲ, ಶಿವಮೊಗ್ಗ,ಬಂಟ್ವಾಳ ಠಾಣೆಗಳಲ್ಲಿ ಶ್ರೀಗಂಧ, ವಾಹನ ಕಳವು, ಅಪಹರಣ, ಅಕ್ರಮ ಮರಳು ಸಾಗಾಟ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಆರೋಪಿಗಾಗಿ ಹಲವು ಸಮಯದಿಂದ ಗ್ರಾಮಾಂತರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಸೋಮವಾರ ರಾತ್ರಿ ಆರೋಪಿಯನ್ನು ವಿಟ್ಲದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ರಾವುತರ್, ಎಎಸ್‌ಐ ಶ್ರೀಧರ್, ಚಂದ್ರಶೇಖರ್, ಕಾನ್‌ಸ್ಟೇಬಲ್‌ಗಳಾದ ವಿನ್ಸೆಂಟ್ ರೊಡ್ರಿಗಸ್, ಪ್ರವೀಣ್, ಸುಧೀರ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News