×
Ad

ಮೋಂಟುಗೋಳಿ: ಕಬಡ್ಡಿ ಪಂದ್ಯಾಟ, ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

Update: 2017-02-14 22:14 IST

ಕೊಣಾಜೆ,ಫೆ.14: ಕಬಡ್ಡಿ ಕ್ರೀಡೆಯು ದೈಹಿಕವಾಗಿ ಸದೃಡವಾಗಿಸುವುದರ ಜೊತೆಗೆ ಪರಸ್ಪರ ಸ್ನೇಹ ವಿಶ್ವಾಸ ಬೆಳೆಸುತ್ತದೆ ಎಂದು ವೈದ್ಯರಾದ ಡಾ.ಜಿ.ಕೃಷ್ಣಭಟ್ ಗಂಗರಮಜಲು ಅಭಿಪ್ರಾಯಪಟ್ಟರು.

ಅವರು ಮೋಂಟುಗೋಳಿ ಸಾರ್ವಜನಿಕ ಮೈದಾನದಲ್ಲಿ ಅಜೇಯ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮೋಂಟುಗೋಳಿ ಇದರ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಾಗೂ ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಂಘ ಸಂಸ್ಥೆಗಳು ಪರಿಸರದಲ್ಲಿ ಪ್ರೀತಿಯ ವಾತಾವರಣ ವನ್ನು ಸೃಷ್ಟಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಕ್ರೀಡೆಯು ಸೌಹಾರ್ದ ವಾತಾವರಣದೊಂದಿಗೆ ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ ಎಂದರು.

ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.

ಏಶ್ಯನ್ ಗೇಮ್ಸ್ ಕಬಡ್ಡಿ ಕ್ರೀಡಾಪಟು ಜಗದೀಶ್ ಕುಂಬಳೆ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಯೇನೆಪೋಯ ಉಚಿತ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ, ಬಿಜೆಪಿ ದ.ಕ. ವಿಾನಸಭಾ ಕ್ಷೇತ್ರ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ಜಾತ್ಯಾತೀತ ಜನತಾದಳ ದ.ಕ. ಜಿಲ್ಲಾ ಉಪಾಧ್ಯಕ್ಷ ಸೂಫೀಕುಂಞಿ ಗುದುರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ್ ಕಾಜವ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರು ನಂದರಾಜ್ ಶೆಟ್ಟಿ ಪಿಜಿನಬೈಲು, ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರ ನಾಸಿರ್ ನಡುಪದವು, ಯುವ ಕಾಂಗ್ರೇಸ್ ದ.ಕ.ಜಿಲ್ಲಾ ಉಪಾಧ್ಯಕ್ಷರು ಸುಹೈಲ್ ಕಂದಕ್, ಯುವ ಕಾಂಗ್ರೇಸ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹ್ಮದ್ ಸಾಮಣಿಗೆ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ಸಿದ್ದೀಕ್ ಪಾರೆ, ಬಾಳೆಪುಣಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರ ಎಂ.ಎಸ್.ಸುಲೈಮಾನ್, ಉದ್ಯಮಿಗಳಾದ ಹಮೀದ್ ಕುಂಜತ್ತೂರ್, ಸಂತೋಷ್ ಕುಮಾರ್ ತೊಕ್ಕೋಟು, ಜಗದೀಶ್ ಮುಡಿಪು, ನಟ ರಿತೇಶ್ ತೊಕ್ಕೋಟು, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಮಧು ಜಿ.ಆರ್, ಅಜೇಯ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರ ಅಬ್ಬಾಸ್ ಎರ್ಮಾಟಿ, ಬ್ಲಡ್ ಡೋನರ್ಸ್‌ನ ಸಿದ್ದೀಕ್ ಉರ್ಣಿ ಭಾಗವಹಿಸಿದ್ದರು.

ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರು ಹೈದರ್ ಕೈರಂಗಳ ಸ್ವಾಗತಿಸಿ. ನೌಫಲ್ ಮೋಂಟುಗೋಳಿ ವಂದಿಸಿದರು. ಅಬ್ದುಲ್ ಸತ್ತಾರ್ ಕೈರಂಗಳ ಮತ್ತು ಇರ್ಷಾದ್ ತೋಟಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News