×
Ad

ಕಪ್ಪ ಕಾಣಿಕೆ ಹಗರಣ: ನ್ಯಾಯಾಂದ ತನಿಖೆಗೆ ಎಸ್.ಡಿ.ಪಿ.ಐ ಆಗ್ರಹ

Update: 2017-02-14 22:22 IST

ಬೆಂಗಳೂರು, ಫೆ.14: ರಾಷ್ಟ್ರೀಯ ರಾಜಕೀಯ ಪಕ್ಷಗಳ ನಾಯಕರು ಹೈಕಮಾಂಡ್‌ಗಳಿಗೆ ಕಪ್ಪ ಹೆಸರಿನಲ್ಲಿ ನಡೆಸುತ್ತಿರುವ ಭ್ರಷ್ಟಚಾರ ಹಾಗೂ ಸಾವಿರಾರು ಕೋಟಿ ಕಪ್ಪುಹಣದ ಹಗರಣವನ್ನು ಕೂಡಲೇ ನ್ಯಾಯಾಂಗ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚಿಗೆ ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿ.ಜೆ.ಪಿ ನಾಯಕರು ತಮ್ಮ ಹೈಕಮಾಂಡ್‌ಗಳಿಗೆ ಪಕ್ಷದ ನಿಧಿ ಹೆಸರಿನಲ್ಲಿ ಕಪ್ಪಕಾಣಿಕೆ ನೀಡುತ್ತಿರುವ ವಿಷಯ ಬಹಿರಂಗವಾಗಿರುವುದು ಇಡೀ ಕರ್ನಾಟಕಕ್ಕೆ ಕಳಂಕವನ್ನು ತಂದಿದೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶದಿಂದ ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸುವ ಮೂಲಕ ಇಡೀ ಕನ್ನಡಿಗರ ಮಾನವನ್ನು ಹರಾಜುಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ತೆರಿಗೆದಾರರ ಹಣ ಭ್ರಷ್ಟಚಾರ ಮತ್ತು ಸ್ವಜನ ಪಕ್ಷಪಾತದಿಂದ ಸೊರಿಕೆಯಾಗಬಾರದು. ಕಾಮಗಾರಿ ಇತರ ಸೌಲಭ್ಯಗಳಲ್ಲಿ ಕಮಿಶನ್ ಪಡೆಯುವುದು ಶಾಶ್ವತವಾಗಿ ನಿಲ್ಲಬೇಕಿದೆ. ಕಾಂಗ್ರೆಸ್-ಬಿ.ಜೆ.ಪಿ ಪಕ್ಷದ ನಾಯಕರು ದಶಕಗಳಿಂದ ತಮ್ಮ ರಾಷ್ಟ್ರೀಯ ನಾಯಕರು ಮತ್ತು ತಮ್ಮ ಪಕ್ಷಕ್ಕೆ ಭ್ರಷ್ಟಚಾರದ ಹಣವನ್ನು ನಿರಂತರವಾಗಿ ನೀಡುತ್ತಿದ್ದಾರೆ ಎದವರು ಆರೋಪ ಮಾಡಿದ್ದಾರೆ.

ಬಂಡವಾಳ ಶಾಹಿಗಳಿಗೆ, ಬೃಹತ್‌ಉದ್ದಿಮೆದಾರರಿಗೆ, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಪಡೆಯುವ ಕೊಟ್ಯಂತರ ಕಿಕ್‌ಬ್ಯಾಕ್‌ಅನ್ನು ಹೈಕಮಾಂಡ್‌ಗೆ ಕಾಲಕಾಲಕ್ಕೆ ಸಲ್ಲಿಸುತ್ತಿರುವುದು ಆ ಪಕ್ಷಗಳ ನಾಯಕರೇ ಬರಂಗವಾಗಿ ಒಪ್ಪಿಕೊಂಡಿದ್ದಾರೆ. ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಸಂಸ್ಥೆಯಿಂದ ಕೋಟ್ಯಂತರ ರೂ. ಪಡೆದಿದ್ದನ್ನು ಸಹರಾದಿಂದ ವಶಪಡಿಸಿಕೊಂಡ ಡೈರಿಯಲ್ಲಿ ಉಲ್ಲೇಖವಾಗಿದೆ. ಭ್ರಷ್ಟಚಾರದ ವಿರುದ್ಧ ಮಾತನಾಡುವ ನೈತಿಕತೆ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗಿಲ್ಲ. ಕನ್ನಡಿಗರು ಒಂದಾಗಿ ಈ ಎರಡು ಪಕ್ಷಗಳ ಭ್ರಷ್ಟಚಾರವನ್ನು ವಿರೋಧಿಸಿ ಉಗ್ರ ಹೋರಾಟ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ ಜನಾಂದೋಲನ ರೂಪುಗೊಳ್ಳಬೇಕಿದೆ ಎಂದು ಅಬ್ದುಲ್ ಹನ್ನಾನ್ ಪ್ರತಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News