ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಸುರಂಗ ಪತ್ತೆ
Update: 2017-02-14 23:41 IST
ಜಮ್ಮು, ಫೆ.14: ಜಮ್ಮು ವಿನ ಸಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಸುರಂಗವೊಂದನ್ನು ಗಡಿಭದ್ರತಾ ಪಡೆಯ ಯೋಧರು ಪತ್ತೆ ಹಚ್ಚಿದ್ದು, ಗಡಿ ದಾಟಿ ದೇಶದೊಳಗೆ ನುಸುಳುವ ಭಯೋತ್ಪಾದ ಕರ ಪ್ರಯತ್ನದ ಒಂದು ಭಾಗ ಇದಾಗಿರಬೇಕು ಎಂದು ಶಂಕಿಸಲಾಗಿದೆ.
2.5 ಅಡಿ ಅಗಲ, 2.5 ಅಡಿ ಎತ್ತರದ ಈ ಸುರಂಗವು ಗಡಿಯಾಚೆಯ ಪಾಕಿಸ್ತಾನದ ಬದಿಯಿಂದ ಆರಂಭವಾಗಿದ್ದು ಜಮ್ಮುವಿನ ರಾಮಗಡ ಸೆಕ್ಟರ್‌ನ ಭಾರತೀಯ ಭೂಪ್ರದೇಶದ ಗಡಿ ಬೇಲಿಗಿಂತ ಸುಮಾರು 20 ಮೀಟರ್ ದೂರದಲ್ಲಿ ಈ ಸುರಂಗವನ್ನು ಪತ್ತೆಹಚ್ಚಲಾಗಿದೆ. ಈ ಸುರಂಗ ತೋಡುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಭಾರತೀಯ ಗಡಿಭಾಗದ ಒಳಕ್ಕೆ ಪ್ರವೇಶಿಸುವ ಮೊದಲು ಇದನ್ನು ಪತ್ತೆಹಚ್ಚಲಾಗಿದೆ ಎಂದು ಬಿಎಸ್‌ಎಫ್‌ನ ಡಿಐಜಿ ಧರ್ಮೇಂದ್ರ ಪರೀಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಾಕ್ ಗಡಿಭದ್ರತಾ ಪಡೆಯೊಂದಿಗೆ ನಡೆಯಲಿರುವ ಧ್ವಜ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಲಾಗುವುದು ಎಂದವರು ತಿಳಿಸಿದ್ದಾರೆ. .