ದಡಾರ: ಗೊಂದಲದ ದಡದಲ್ಲೇ ಗ್ರಾಮೀಣ ಮುಸ್ಲಿಮರು!

Update: 2017-02-14 18:28 GMT

ಬಂಟ್ವಾಳ, ೆ.14: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ದಡಾರ-ರುಬೆಲ್ಲಾ ಚುಚ್ಚುಮದ್ದು ಕುರಿತು ಮುಸ್ಲಿಮರಲ್ಲಿ ಸೃಷ್ಟಿಯಾಗಿರುವ ಗೊಂದಲ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ.

ಆರೋಗ್ಯ ಇಲಾಖೆಯ ಮೂಲಗಳೇ ತಿಳಿಸಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಚುಚ್ಚುಮದ್ದು ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ ಹಾಗೂ ಚುಚ್ಚುಮದ್ದು ಇರುವ ದಿನ ಮುಸ್ಲಿಮ್ ವಿದ್ಯಾರ್ಥಿಗಳು ಶಾಲೆಗೆ ಸಾಮೂಹಿಕ ಗೈರುಹಾಜರಿಯಾಗುತ್ತಿದ್ದಾರೆ. ದಡಾರ ಚುಚ್ಚುಮದ್ದು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಮಾಡಿರುವ ಅಪಪ್ರಚಾರದಿಂದ ಮುಸ್ಲಿಮರಲ್ಲಿ ಗೊಂದಲ ಮನೆ ಮಾಡಿತ್ತು. ಗೊಂದಲದ ನಿವಾರಣೆಗಾಗಿ ಸಾಕಷ್ಟು ಪ್ರಯತ್ನ ಮಾಡಲಾಗಿದ್ದು, ಉಭಯ ಜಿಲ್ಲೆಗಳ ಖಾಝಿಗಳಲ್ಲಿ ಪ್ರಕಟನೆ ಕೊಡಿಸಲಾಗಿದೆ. ಬಹುತೇಕ ಮಸೀದಿಗಳ ಗುರುಗಳು, ಆಡಳಿತ ಮಂಡಳಿಯವರನ್ನು ಭೇಟಿ ಮಾಡಿ ಮಸೀದಿಗಳಲ್ಲಿ ಚುಚ್ಚುಮದ್ದಿನ ಪ್ರಯೋಜನದ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡುವಂತೆ ಮನವಿ ಮಾಡಿದ್ದೇವೆ. ಪ್ರತೀ ಶಾಲೆಗಳಿಗೆ, ಸಾಧ್ಯವಾದಷ್ಟು ಮನೆ ಮನೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಲಾಗಿದ್ದರೂ ಗ್ರಾಮೀಣ ಪ್ರದೇಶಗಳ ಹೆಚ್ಚಿನ ಮುಸ್ಲಿಮರಲ್ಲಿ ಚುಚ್ಚುಮದ್ದಿನ ಕುರಿತ ಗೊಂದಲ ಇನ್ನೂ ನಿವಾರಣೆಯಾದಂತೆ ಕಾಣುತ್ತಿಲ್ಲ ಎಂದು ಬಂಟ್ವಾಳ ತಾಲೂಕು ಆರೋಗ್ಯಾಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.

ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿವರ ನೀಡಿದ ಅವರು, ಬಂಟ್ವಾಳ ತಾಲೂಕಿನಲ್ಲಿ ದಡಾರ-ರುಬೆಲ್ಲಾ ಚುಚ್ಚುಮದ್ದು ಕಾರ್ಯಕ್ರಮ ಶೇ.100ರಷ್ಟು ಗುರಿ ಸಾಸುವ ನಿಟ್ಟಿನಲ್ಲಿ ನಡೆಸಿದ ಪೂರ್ವಭಾವಿ ಸಿದ್ಧತೆಗಳಂತೆ ಇಲಾಖೆಯ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಅಭಿಯಾನದ ಪ್ರಥಮ ದಿನ ಫೆ.7ರಂದು ಶೇ.74, ಫೆ.8ರಂದು ಶೇ.71, ಫೆ.11ರಂದು ಶೇ.86, ಫೆ.13ರಂದು ಶೇ. 87 ವಿದ್ಯಾರ್ಥಿಗಳು ಚುಚ್ಚುಮದ್ದು ಪಡೆದಿದ್ದಾರೆ. ತಾಲೂಕಿನಲ್ಲಿ ನಾಲ್ಕು ದಿನಗಳಲ್ಲಿ ಒಟ್ಟು 78.64 ಗುರಿ ಸಾಸಲಾಗಿದೆ ಎಂದು ಹೇಳಿದರು.

ಬಂಟ್ವಾಳ ತಾಲೂಕಿನ ಪುದು, ಮಂಚಿ, ಕುರ್ನಾಡು, ಸಜೀಪನಡು, ಸಜೀಪ ಮೂಡಾ, ಸಜೀಪ ಮುನ್ನೂರು ಸಹಿತ ಮುಸ್ಲಿಮ್ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಚುಚ್ಚುಮದ್ದು ಅಭಿಯಾನ ಹಮ್ಮಿಕೊಂಡ ದಿನ ಮಕ್ಕಳು ಶಾಲೆಗೆ ಸಾಮೂಹಿಕ ಗೈರು ಹಾಜರಾಗುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಚುಚ್ಚುಮದ್ದು ಪಡೆಯುವ ವಿದ್ಯಾರ್ಥಿಗಳ ಶೇಕಡಾವಾರಿನಲ್ಲಿ ಹೆಚ್ಚಳವಾಗುತ್ತಿರುವುದು ಆಶಾದಾಯಕ. ಗೊಂದಲಕ್ಕೆ ಕಾರಣ ವಾದ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದೆ ತಾಲೂಕಿನಲ್ಲಿರುವ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳು ಚುಚ್ಚುಮದ್ದು ಪಡೆಯುವಂತಾಗಬೇಕು ಎಂದವರು ಪ್ರಶ್ನೆ ಯೊಂದಕ್ಕೆ ಉತ್ತರಿಸಿದ್ದಾರೆ.

ಅಲ್ಲದೆ ದ.ಕ. ಜಿಲ್ಲಾ ಮಟ್ಟದಲ್ಲಿ ಅಭಿಯಾನದಪ್ರಥಮ ದಿನವಾದ ಫೆ.7ರಂದು ಶೇ.81, ಫೆ.8ರಂದು ಶೇ.79, ಫೆ. 11ರಂದು ಶೇ.86, ಫೆ.13ರಂದು ಶೇ. 86.5ರಷ್ಟು ಮಕ್ಕಳು ಚುಚ್ಚುಮದ್ದು ಹಾಕಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕು ದಿನಗಳಲ್ಲಿ ಶೇ.83ರಷ್ಟು ಗುರಿ ಸಾ ಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಕಾರಿ ಮಾಹಿತಿ ನೀಡಿದ್ದಾರೆ.

ಶಾಲೆಯಲ್ಲಿ ಕೊಡದವರು ಎಲ್ಲಿ ಕೊಡಿಸಬೇಕು?

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಗುರುವಾರ ಹೊರೆತುಪಡಿಸಿ ವಾರದ ಉಳಿದ ಎಲ್ಲ ದಿವಸ ದಡಾರ-ರುಬೆಲ್ಲಾ ಚುಚ್ಚುಮದ್ದು ಕೊಡುವ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗಿದೆ. ಶಾಲೆಯಲ್ಲಿ ಚುಚ್ಚು ಮದ್ದು ಕೊಡಿಸದೆ ಇರುವ ಹಾಗೂ ಶಾಲೆಗೆ ಹೋಗದ ಮಕ್ಕಳು ಇಲ್ಲಿಗೆ ತೆರಳಿ ಚುಚ್ಚುಮದ್ದು ಕೊಡಿ ಸಬಹುದಾಗಿದೆ.

ಅಲ್ಲದೆ ಅಂಗನವಾಡಿ ಕೇಂದ್ರಗಳಲ್ಲೂ ನಿಗದಿತ ದಿನಾಂಕದಂದು ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಲಾಗುವುದು. ಅಂಗನವಾಡಿಗಳಲ್ಲಿ ಚುಚ್ಚುಮದ್ದು ಕೊಡುವವರು ಅಂಗನವಾಡಿ ಕಾರ್ಯ ಕರ್ತೆಯರಲ್ಲಿ ಚುಚ್ಚುಮದ್ದು ಕೊಡುವ ದಿನಾಂಕವನ್ನು ಕೇಳಿ ತಿಳಿಯಬೇಕು.

ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ಚುಚ್ಚುಮದ್ದು ಕೊಡಲಾಗಿದೆ. ಎಲ್ಲೂ ಯಾವುದೇ ಅಡ್ಡಪರಿಣಾಮವಾಗಲಿ, ಆತಂಕದ ಸ್ಥಿತಿಯಾಗಲಿ ನಿರ್ಮಾಣವಾಗಿಲ್ಲ. ಯಾರೋ ಹೇಳಿದ ಸುಳ್ಳು ಸುದ್ದಿ ಕೇಳಿ ಚುಚ್ಚುಮದ್ದು ನೀಡದೆ ಇರುವುದಕ್ಕೆ ಅರ್ಥವಿಲ್ಲ. ಶಾಲೆಯಲ್ಲಿ ಚುಚ್ಚುಮದ್ದು ನೀಡದವರು ೆ.30ರೊಳಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದನ್ನು ಕೊಡಿಸಬಹುದು. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಹಮ್ಮಿಕೊಂಡಿರುವ ಈ ಚುಚ್ಚುಮದ್ದು ಅಭಿಯಾನದ ಕುರಿತು ಯಾವುದೇ ಆತಂಕ ಬೇಡ.

*ಡಾ. ದೀಪಾ ಪ್ರಭು, ಬಂಟ್ವಾಳ ತಾಲೂಕು ಆರೋಗ್ಯಾಕಾರಿ

Writer - *ಇಮ್ತಿಯಾಝ್ ಶಾ ತುಂಬೆ

contributor

Editor - *ಇಮ್ತಿಯಾಝ್ ಶಾ ತುಂಬೆ

contributor

Similar News