ನಾಳೆ ಅಂತಾರಾಷ್ಟ್ರೀಯ ‘ಚೈಲ್ಡ್‌ವುಡ್ ಕ್ಯಾನ್ಸರ್ ಡೇ’

Update: 2017-02-14 18:28 GMT

ಮಂಗಳೂರು, ಫೆ.14: ನಗರದ ಅತ್ತಾವರ ಕೆಎಂಸಿ ತನ್ನ 25ರ ಸಂಭ್ರಮಾಚರಣೆಯ ಪ್ರಯುಕ್ತ ೆ.16ರಂದು ಇಂಟರ್‌ನ್ಯಾಷನಲ್ ಚೈಲ್ಡ್‌ವುಡ್ ಕ್ಯಾನ್ಸರ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಹರ್ಷ ಪ್ರಸಾದ್ ಹೇಳಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯ ಸಂಜೀವಿನಿ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮವನ್ನು ಮಿಸ್ಟರ್ ಇಂಡಿಯಾ ವಿಜೇತ ಅಲೆಸ್ಟರ್ ಡಿಸೋಜ ಉದ್ಘಾಟಿಸಲಿದ್ದಾರೆ ಎಂದರು.

   ಕ್ಯಾನ್ಸರ್ ಪೀಡಿತ ಮಕ್ಕಳು ಚಿಕಿತ್ಸೆ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಿದೆ. ಕ್ಯಾನ್ಸರ್ ದಿನಾಚರಣೆ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಹಾಗೂ ಕ್ಯಾನ್ಸರ್‌ನಿಂದ ಗೆದ್ದು ಬರುವ ಮಕ್ಕಳಿಗೆ ಜೀವನೋತ್ಸವ ತುಂಬಿಸುವ ಚಟುವಟಿಕೆಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

  ಸುದ್ದಿಗೋಷ್ಠಿಯಲ್ಲಿ ಡಾ.ಕಮಾಲಾಕ್ಷಿ ಭಟ್, ಡಾ. ಸಂತೋಷ್ ರೈ, ಡಾ. ಪ್ರಹ್ಲಾದ್ ಕುಷ್ಟಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News