ಚಿರತೆಗಳ ಹಾವಳಿ: ಅರಣ್ಯಾಕಾರಿಗಳಿಗೆ ಗ್ರಾಮಸ್ಥರ ಮೊರೆ

Update: 2017-02-14 18:40 GMT

ಮೂಡುಬಿದಿರೆ, ಫೆ,14: ಚಿರತೆಗಳಿಂದಾಗಿ ಜಾನುವಾರು ಗಳ ರಕ್ಷಣೆ ಅಸಾಧ್ಯವಾಗಿದ್ದು, ಕಾಡುಪ್ರಾಣಿಗಳ ಭಯ ದಿಂದ ಓಡಾಟ ಅಸಾಧ್ಯವಾಗಿದೆ. ಚಿರತೆಗಳು ಪರಿಸರ ದಲ್ಲಿ ಆಗಾಗ ಸುತ್ತಾಡುತ್ತಿವೆೆ. ಈ ಬಗ್ಗೆ ಅರಣ್ಯ ಇಲಾ ಖೆಯು ಕ್ರಮ ಕೈಗೊಂಡು ಅವುಗಳಿಂದ ರಕ್ಷಣೆ ಒದಗಿಸಿ ಎಂದು ಶಿರ್ತಾಡಿ ಗ್ರಾಪಂ ವ್ಯಾಪ್ತಿಯ ಮಲೆಬೆಟ್ಟು ಕೊಡಂಬೇಲು ಪರಿಸರದ ನಿವಾಸಿಗಳು ಶಿರ್ತಾಡಿ ಗ್ರಾಮಸಭೆಯಲ್ಲಿ ಆಗ್ರಹಿಸಿದರು.

ಈಗಾಗಲೇ ಈ ಪ್ರದೇಶದಲ್ಲಿ 2 ದನಗಳನ್ನು ಬಲಿ ಪಡೆದಿರುವ ಚಿರತೆಗಳ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ಭಾಗ ವಹಿಸಿದ್ದ ಉಪವಲಯಾರಣ್ಯಾಕಾರಿ ಚಂದ್ರಕಾಂತ್ ಬೋನುಗಳನ್ನಿಟ್ಟು ಚಿರತೆಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತೇವೆಂದು ಭರವಸೆಯಿತ್ತರು. ಸೋಮವಾರ ಶಿರ್ತಾಡಿ ಪಂ. ಅಧ್ಯಕ್ಷೆ ಲತಾ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಪಂ. ಸಭಾಭವನದಲ್ಲಿ ಗ್ರಾಮ ಸಭೆ ನಡೆಯಿತು. ಇದುವರೆಗೆ ಗ್ರಾಮಸ್ಥರು ಚಿರತೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಿಲ್ಲ. ಚಿರತೆಗಳ ಓಡಾಟದ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಹಿಡಿಯುವುದಕ್ಕೆ ಸುಲಭವಾಗುತ್ತದೆ ಎಂದು ಅರಣ್ಯಾಕಾರಿ ಮಾಹಿತಿ ಹೇಳಿದರು.

ಶಿರ್ತಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ ಕಾರಿ ನಸೀಬಾ ಮಾತನಾಡಿ ದಡಾರ-ರುಬೆಲ್ಲಾ ಲಸಿಕೆ ಯ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆತ್ತವರು ಹೆದರಬೇಕಾಗಿಲ್ಲ. ಇದರಲ್ಲಿ ಮಕ್ಕ ಳಿಗೆ ಯಾವುದೇ ರೀತಿಯ ತೊಂದರೆಗಳಿಲ್ಲ. ಜಾತಿ ಭೇದ ವಿಲ್ಲದೆ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ಹಾಕಿಸಿ ಕೊಳ್ಳಿ ಎಂದು ತಿಳಿಸಿದರು.

ಕೃಷಿ ಅಕಾರಿ ನರಸಿಂಹ, ಪಿಡಿಒ ಭೀಮಾ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಸುನೀತಾ, ಜಿಪಂ ಇಂಜಿನಿಯರ್‌ನ ಸಹಾಯಕ ಕೃಷ್ಣ ನಾಯ್ಕಾ ಜಿಪಂ ಸದಸ್ಯೆ ಸುನೀತಾ, ತಾಪಂ ಸದಸ್ಯೆ ನಾಗವೇಣಿ, ಗ್ರಾಪಂ ಉಪಾಧ್ಯಕ್ಷ ರಾಜೇಶ್ ಸುವರ್ಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿರ್ತಾಡಿ ವಲಯದ ಮೇಲ್ವಿಚಾರಕಿ ರತಿ ಶೆಟ್ಟಿ, ಸ್ಟಾನಿ, ರವಿ ಕುಮಾರ್ ಸಹಿತ ಕಂದಾಯ, ಪಂಚಾಯತ್ ಸದಸ್ಯರು, ಮೆಸ್ಕಾಂ ಇಲಾಖಾಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News