ಭಾರತೀಯ ಗೆಳೆಯನಿಂದ ಅತ್ಯಾಚಾರ : ಪೊಲೆಂಡ್ ಯುವತಿ ದೂರು
ಹೊಸದಿಲ್ಲಿ.ಫೆ. 15: ಪೊಲೆಂಡ್‌ನ ಮೂವತ್ತೊಂದು ವರ್ಷದ ಯುವತಿಯೊಬ್ಬರು ಭಾರತೀಯ ಗೆಳೆಯ ಮದುವೆಯಾಗುವುದಾಗಿ ಮಾತು ಕೊಟ್ಟು ಅತ್ಯಾಚಾರವೆಸಗಿದ್ದಾನೆಂದು ದಿಲ್ಲಿ ವಸಂತ್‌ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ನಂತರ ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಂದೆ ಯುವತಿ ಸಾಕ್ಷ್ಯ ಹೇಳಿದ್ದಾಳೆ.
ಜೊತೆಗೆ ಹಡಗಿನಲ್ಲಿ ಕೆಲಸ ಮಾಡುತ್ತಿದ್ದವೇಳೆ 2014 ರಿಂದ ಇಬ್ಬರು ಗೆಳೆಯರಾಗಿದ್ದೇವೆ. ನಂತರ ಇಬ್ಬರು ಅವರವರ ಊರಿಗೆ ಮರಳಿದ್ದೆವು. ನಂತರ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಬಂಧವನ್ನು ಮುಂದುವರಿಸಿದ್ದೆವು. ಭಾರತದ ಗೆಳೆಯ ಮದುವೆ ಆಗುತ್ತೇನೆ ಎಂದು ನಂಬಿಸಿ ಹಲವುಬಾರಿ ದೈಹಿಕ ಸಂಪರ್ಕ ಮಾಡಿದ್ದಾನೆ. ತನ್ನಲ್ಲಿದ್ದ ಹಣವನ್ನು ಕೈವಶ ಪಡಿಸಿಕೊಂಡಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.
ಫೋನ್ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕವನ್ನೇ ಭಾರತೀಯ ಗೆಳೆಯ ಸಂಪರ್ಕವನ್ನು ಕಡಿದುಕೊಂಡಾಗ ಈತನನ್ನು ಹುಡುಕಿ ಯುವತಿ ಭಾರತಕ್ಕೆ ಬಂದಿದ್ದಾಳೆ. ಆದರೆ ಆತ ಊರಿನಲ್ಲಿಲ್ಲ. ಫ್ರಾನ್ಸ್‌ನಲ್ಲಿ ಹಡಗಿನಲ್ಲಿ ಕೆಲಸಮಾಡುತ್ತಿದ್ದಾನೆ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದಳೆಂದು ವರದಿ ತಿಳಿಸಿದೆ.