ಕೊಡಂಗೆ: ಫೆ.16ರಂದು ಉಚಿತ ಆರೋಗ್ಯ ಶಿಬಿರ
Update: 2017-02-15 15:42 IST
ಬಂಟ್ವಾಳ, ಫೆ. 15: ಬ್ಯಾರಿ ಫೌಂಡೇಶನ್ ಬಂಟ್ವಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಫೆ.16ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಕೈಕಂಬ ಸಮೀಪದ ಕೊಡಂಗೆ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.