×
Ad

ಆಳ್ವಾಸ್ ಎಐಇಟಿ, ಎಂಬಿಎ ವಿಭಾಗದಿಂದ ಮಾಹಿತಿ ಶಿಬಿರ

Update: 2017-02-15 16:30 IST

ಮೂಡುಬಿದಿರೆ,ಫೆ.15 : ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ವತಿಯಿಂದ ಒಂದು ದಿನದ ಸಾಮಾಜಿಕ ಕಾರ್ಯಕ್ರಮದ ಮಾಹಿತಿ ಶಿಬಿರ ಮಿಜಾರಿನ ದಡ್ಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಂಬಿಎ ವಿದ್ಯಾರ್ಥಿಗಳು ಮತ್ತು ಪ್ರಾದ್ಯಾಪಕರು ಭಾಗವಹಿಸಿದ್ದರು.

ಈ ಮಾಹಿತಿ ಶಿಬಿರದಲ್ಲಿ ಪ್ರಮುಖ ಉದ್ದೇಶವು ಹಳ್ಳಿಯ ಜನರಿಗೆ ಬ್ಯಾಂಕಿನ ಹಲವು ಯೋಜನೆಗಳ ಬಗ್ಗೆ, ಹಣಕಾಸಿನ ಸೇರಿಸಿಕೊಳ್ಳುವಿಕೆ, ಜೀವ ವಿಮಾ ಯೋಜನೆಗಳು, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳು, ನಗದು ರಹಿತ ವ್ಯವಹಾರದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮಸ್ಥರ ಸಮಸ್ಯೆಗಳನ್ನು ಅರಿತುಕೊಂಡ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಸಲಹೆಗಳನ್ನು ನೀಡಿದರು.

ಈ ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿಗಾರ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಮಕೃಷ್ಣ ಚಡಗರವರು ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರುಗಳಾದ ಡಾ. ವಿಶ್ವನಾಥ್, ಡಾ. ನಾಗೇಂದ್ರ, ಪ್ರೊ. ಗುರುದತ್ ಸೋಮಯಾಜಿ ಮತ್ತು ಪ್ರೊ. ಜಾನ್ಸನ್ ಫೆರ್ನಾಂಡಿಸ್‌ರವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News