6 ತಿಂಗಳಲ್ಲಿ ಇಮಾನ್‌ಳ ತೂಕವನ್ನು 200 ಕೆ.ಜಿ. ಕಡಿಮೆ ಮಾಡುತ್ತೇವೆ: ವೈದ್ಯರು
ಹೊಸದಿಲ್ಲಿ.ಫೆ. 15: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಭಾರದ ಯುವತಿ ಇಮಾನ್ ಅಹ್ಮದ್‌ಳಲ್ಲಿ ಹೊಸ ನಿರೀಕ್ಷೆಯನ್ನು ಮುಂಬೈಯ ವೈದ್ಯರು ಹುಟ್ಟುಹಾಕಿದ್ದಾರೆ. ಅವಳ 500 ಕೆ.ಜಿ.ಭಾರದಿಂದ ಆರುತಿಂಗಳಲ್ಲಿ 200 ಕೆ.ಜಿ. ಭಾರ ಕಡಿಮೆ ಮಾಡಬಹುದು. ಮತ್ತು ಆಕೆಸಾಮಾನ್ಯ ಜೀವನಕ್ಕೆ ಮರಳಿಬರುವಳು ಎಂದು ವೈದ್ಯರು ಹೇಳಿದ್ದಾರೆ.
ಜಗತ್ತಿನ ಅತ್ಯಂತ ಭಾರದ ಈಜಿಪ್ಟ್ ಮಹಿಳೆ ಇಮಾನ್ ಅಹ್ಮದ್‌ರ ಚಿಕಿತ್ಸೆಗಾಗಿ ಮುಂಬೈಯ ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಇಮಾನ್‌ಳ ದೇಹದ ಭಾರವನ್ನು 500ಕೆ.ಜಿ.ಯಿಂದ 100 ಕೆ.ಜಿ.ಗೆ ಇಳಿಸುವುದು ನಮ್ಮ ಅಂತಿಮ ಉದ್ದೇಶವಾಗಿದೆ ಎಂದಿದ್ದಾರೆ.
ಸೋಮವಾರ ಅವಳ ಚಿಕಿತ್ಸೆ ಆರಂಭವಾಗಿದೆ. ಈಗ ಏಳಲು, ಕೂತುಕೊಳ್ಳಲು ಸಾಧ್ಯವಾಗದೆ ಇಮಾನ್ ಕಷ್ಟಪಡುತ್ತಿದ್ದಾಳೆ. ಇಮಾನ್ ಸ್ವಯಂ ಎದ್ದು ಕುಳಿತುಕೊಳ್ಳಬೇಕು. ಆಹಾರ ಸೇವಿಸಬೇಕು. ಇತರರ ಸಹಾಯ ಇಲ್ಲದೆ ಬಾತ್‌ರೂಂ ಬಳಸಬೇಕೆಂದು ಈಗ ಇಮಾನ್‌ಳಿಗೆ ಚಿಕಿತ್ಸೆ ನೀಡುವ ವೈದ್ಯರು ಶ್ರಮಿಸುತ್ತಿದ್ದಾರೆ. ಕಳೆದ ಮೂರು ವಾರಗಳ ಅವಧಿಯಲ್ಲಿ ನಿರಂತರ ಚಿಕಿತ್ಸೆಯಿಂದ ಇಪ್ಪತ್ತು ಕೆ.ಜಿ. ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಇಮಾನ್ ಜೊತೆ ಈಜಿಪ್ಟ್‌ನಿಂದ ಹೊರಟು ಬಂದಿದ್ದ ವೈದ್ಯರು ಹೇಳಿದ್ದಾರೆ.