ರೈತರು ಬದಲಾವಣೆಯ್ತ ಸಾಗಬೇಕು : ಬಾಹುಬಲಿ ಪ್ರಸಾದ್
ಮೂಡುಬಿದಿರೆ,ಫೆ.15 : ಕೃಷಿ ಹಾಗೂ ಜ್ಞಾನ ನೀಡುವಂತಹ ಮಾಹಿತಿಯುಕ್ತ ವಿಚಾರಗಳನ್ನು ರೈತರು ಮತ್ತು ಜನರಿಗೆ ತಿಳಿಸುವ ಮೂಲಕ ಕೃಷಿಯ ಬೆಳವಣಿಗೆಯಲ್ಲಿ ಆಕಾಶವಾಣಿ ಮಾಧ್ಯಮವುಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಈ ದೇಶ ಹಾಗೂ ಜಗತ್ತು ಬದಲಾವಣೆಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿಕೃಷಿಕರು ಕೃಷಿಯಲ್ಲಿ ಆಧುನಿಕತೆಯನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಎಂಸಿಎಸ್ ಬ್ಯಾಂಕ್‌ನ ನಿರ್ದೇಶಕ, ಪುರಸಭಾ ಸಸ್ಯ ಬಾಹುಬಲಿ ಪ್ರಸಾದ್ ಹೇಳಿದರು.
ಅವರು ಆಕಾಶವಾಣಿ ಮಂಗಳೂರು, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಹಾಗೂ ಎಂ.ಸಿ.ಎಸ್ ಬ್ಯಾಂಕ್ ಇವುಗಳ ಸಹಭಾಗಿತ್ವದಲ್ಲಿ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಬುಧವಾರ ನಡೆದ "ಬಾನುಲಿ ರೈತ ದಿನಾಚರಣೆ"ಯನ್ನು ರೇಡಿಯೋ ಬಟನ್‌ನ್ನು ತಿರುಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತವು ಗೋಧಿಯನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳುತ್ತಿತ್ತು.ಆದರೆನಂತರಭಾರತವು ಉತ್ಪಾದನಾ ಕ್ಷೇತ್ರದತ್ತ ಗಮನ ನೀಡುವ ಮೂಲಕ ಅಭಿವೃದ್ಧಿ ಕಂಡಿತು. ನಂತರದ ದಿನಗಳಲ್ಲಿ ಭಾರತವೇ ಗೋದಿಯನ್ನು ರಫ್ತು ಮಾಡುವ ಮೂಲಕ ವಿಶ್ವದ ಗಮನ ಸೆಳೆಯಿತು. ರೈತರ ಹೊಸ ಹೊಸ ಪ್ರಯೋಗಗಳಿಗೆ ಆಕಾಶವಾಣಿಯಂತಹ ಮಾದ್ಯಮಗಳಿಂದ ಬೆಂಬಲ ಸಿಗಬೇಕಿದೆ ಎಂದು ಹೇಳಿದರು.
ಆಕಾಶವಾಣಿ ಮಂಗಳೂರು ಕೇಂದ್ರದ ಸಹಾಯಕ ನಿರ್ದೇಶಕಿ (ಕಾರ್ಯಕ್ರಮ) ಎಸ್.ಉಷಾಲತಾ ಅಧ್ಯಕ್ಷತೆಯನ್ನು ವಹಿಸಿದ್ದರು. .ಕ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾಎಚ್.ಕೆಂಪೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷಿಕರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಉತ್ಪಾದನ ವೆಚ್ಚದಲ್ಲಿ ಹಿಡಿತ, ಯಂತ್ರಗಳ ಉಪಯೋಗ, ಮಳೆಯ ಸದ್ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಕೃಷಿಕರ ಅಭಿವೃದ್ಧಿ ಸಾಧ್ಯ. ಕೃಷಿಕರು ತಮ್ಮ ಪರಿಶ್ರಮದ ಮೂಲಕ ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಹೊಸಹೊಸ ಅವಿಷ್ಕಾರಗಳಿಗೆ ತೆರೆದುಕೊಳ್ಳಬೇಕು. ಆ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸನ್ಮಾನ :ಈ ಸಂದರ್ಭದಲ್ಲಿ ಕೃಷಿಕ ಕೊರ್ಡೇಲು ಜಯಚಂದ್ರ ರಾವ್ ದಂಪತಿಯನ್ನು ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಆಕಾಶವಾಣಿಯ ಉಪನಿರ್ದೇಶಕ ಜಿ.ರಮೇಶ್‌ಚಂದ್ರನ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಭಾಶ್ಚಂದ್ರ ಚೌಟ ಸ್ವಾಗತಿಸಿದರು. ಕಾರ್ಯಕ್ರಮದ ಸಮನ್ವಯಾಧಿಕಾರಿ ಸದಾನಂದ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೃಷಿ ವಿಚಾರ ವಿನಿಮಯ ಕೇಂದ್ರದ ಕಾರ್ಯದರ್ಶಿ ಜಿನೇಂದ್ರ ಸನ್ಮಾನಿತರ ಪತ್ರ ವಾಚಿಸಿದರು. ಎಮ್‌ಸಿಎಸ್ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರದ ಕೋಶಾಧಿಕಾರಿ ಆಲಿ್ವೀನ್ ಮಿನೇಜಸ್, ಸುಜಾತ ರಮೇಶ್ ಸಹಕರಿಸಿದರು. ಕೃಷಿ ರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಟಿ.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ವಿಚಾರ ಸಂಕಿರಣದ ಮೊದಲ ಗೋಷ್ಠಿ ಕೃಷಿ ಉತ್ಪಾದನೆ ದ್ವಿಗುಣಗೊಳಿಸುವ ತಂತ್ರಜ್ಞಾನದಲ್ಲಿ ತರಕಾರಿ ಬೆಳೆ ಉತ್ಪಾದನಾ ತಂತ್ರಜ್ಞಾನದ ಬಗ್ಗೆ ಡಾ ಬಿ.ಧನಂಜಯ ಅವರು, ಕಾಳು ಮೆಣಸು ಕೃಷಿ ತಂತ್ರಜ್ಞಾನದ ಬಗ್ಗೆ ವಿಷಯ ತಜ್ಞ ಡಾ.ಹೆಚ್.ಎಸ್.ಚೈತನ್ಯ, ಹಣ್ಣುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಶ್ಯಾವುಲ ಶಾಸ್ತ್ರಿ ಅವರು ಮಾತನಾಡಿದರು.
2ನೇ ಗೋಷ್ಠಿಯಲ್ಲಿ ಉಡುಪಿಯ ಕುದಿ ಶ್ರೀನಿವಾಸ ಭಟ್ ಕೋಳಿ ಸಾಕಾಣಿಕೆಯ ಬಗ್ಗೆ, ಮಾಣಿಲ ಬೈಕುಂಜದ ರಾಜೇಶ್ ಶಂಕರ್ ಅವರು ಕೊಕ್ಕೊ ಕೃಷಿಯ ಬಗ್ಗೆ, ಪುತ್ತೂರು ಗಣೇಶ್ ನಿಡ್ವಣ್ಣಾಯ ಅವರು ಭತ್ತದ ಕೃಷಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ಮೂರನೇ ಗೋಷ್ಠಿಯಲ್ಲಿ ಮೂಡುಬಿದಿರೆ ತಾಕೋಡೆಯ ಎಡ್ವರ್ಡ್ ರೆಬೆಲ್ಲೋ, ಕಾರ್ಕಳ ಕಾಡುಹೊಳೆಯ ರತ್ನಾಕರ ಪೈ ಹಾಗೂ ಪುತ್ತೂರು ಈಶ್ವರ ಮಂಗಲದ ಪೂರ್ಣಾತ್ಮರಾಮ್ ರೇಡಿಯೋ ಕೃಷಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.