ಫೆ.17-ಮಾ.5: ಪೊಯ್ಯತ್ತಬೈಲ್ ಉರೂಸ್

Update: 2017-02-15 11:57 GMT

ಮಂಗಳೂರು, ಫೆ.15: ಮಂಜೇಶ್ವರ ತಾಲೂಕಿನ ವರ್ಕಾಡಿ ಸಮೀಪದ ಪೊಯ್ಯತ್ತಬೈಲು ಜುಮಾ ಮಸೀದಿ ಹಾಗೂ ಮಣವಾಠಿ ಬೀವಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಫೆ.17ರಿಂದ ಮಾ.5ರವರೆಗೆ ಪೊಯ್ಯತ್ತಬೈಲ್‌ನಲ್ಲಿ ನಡೆಯಲಿದೆ ಎಂದು ಪೊಯ್ಯತ್ತಬೈಲು ಜಮಾಅತ್ ಕಮಿಟಿಯ ನಿಕಟ ಪೂರ್ವ ಅಧ್ಯಕ್ಷ ಟಿ. ಇಸ್ಮಾಯೀಲ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಮತ್ತು ಕರ್ನಾಟಕದ ಸಂಗಮ ಸ್ಥಳವಾದ ಪೊಯ್ಯತ್ತಬೈಲು ಸರ್ವಧರ್ಮೀಯರ ಸೌಹಾರ್ದ ಸಾರುವ ಪುಣ್ಯಭೂಮಿಯಾಗಿದೆ. ಜಾತಿ-ಮತ ಭೇದವಿಲ್ಲದೆ ಸಾವಿರಾರು ಜನರು ದರ್ಗಾಕ್ಕೆ ಸಂದರ್ಶಿಸಿ ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಫೆ.17ರಂದು ಅಪರಾಹ್ನ 2ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಯ್ಯತ್ತಬೈಲು ಜುಮಾ ಮಸೀದಿಯ ಮುದರ್ರಿಸ್ ಹಾಗೂ ಖಾಝಿ ಶೈಖುನಾ ಎಂ. ಆಲಿಕುಂಞಿ ಮುಸ್ಲಿಯಾರ್ ವಹಿಸಲಿದ್ದಾರೆ. ಮಂಜೇಶ್ವರದ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಸೈಯದ್ ಅಥಾವುಲ್ಲಾ ತಂಙಳ್ ಎಂ.ಎ. ಧ್ವಜಾರೋಹಣಗೈಯಲಿದ್ದಾರೆ. ಫೆ.17ರಂದು ರಾತ್ರಿ 7 ಗಂಟೆಗೆ ನಡೆಯುವ ಮತಪ್ರವಚನದ ಉದ್ಘಾಟನೆಯನ್ನು ಅಲ್‌ಹಾಜ್ ಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ನೆರವೇರಿಸಲಿದ್ದಾರೆ. ಅಖಿಲ ಭಾರತ ಸುನ್ನಿ ಜಮೀಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರವಚನ ನೀಡಲಿದ್ದಾರೆ. ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಪ್ರವಚನ ನೀಡಲಿದ್ದಾರೆ ಎಂದರು.

ಫೆ.18ರಿಂದ ಮಾ.4ರವರೆಗೆ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ, ಅಶ್ರಫ್ ರಹ್ಮಾನಿ ಚೌಕಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸೈಯದ್ ಇಬ್ರಾಹೀಂ ಖಲೀಲ್ ತಂಙಳ್, ಅಲ್ ಬುಖಾರಿ ತಂಙಳ್ ಕಡಲುಂಡಿ, ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು, ರಾಫಿ ಅಹ್ಸನಿ ಕಾಂತಪುರಂ, ಡಾ. ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ, ಸಿರಾಜುದ್ದೀನ್ ದಾರಿಮಿ ಕಕ್ಕಾಡ್, ಇಬ್ರಾಹೀಂ ಸಖಾಫಿ ತಾತೂರ್ ಕೋಝಿಕ್ಕೋಡ್, ಡಾ.ದೇವರ್‌ಶೋಲ ಅಬ್ದುಸ್ಸಲಾಮ್ ಮುಸ್ಲಿಯಾರ್, ಖಾಸಿಂ ದಾರಿಮಿ ಕಿನ್ಯ, ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಮಜೀದ್ ಬಾಖವಿ ಕೊಡುವಳ್ಳಿ, ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.

ಅಸೈಯದ್ ಕೆಎಸ್‌ಎಂ ತಂಙಳ್ ಅಲ್ ಬಾ-ಆಲವಿ ಗಾಂಧಿನಗರ, ಅಸೈಯದ್ ಪಿ.ಎಸ್. ಆಟಕೋಯ ತಂಙಳ್ ಪಂಜಿಕಲ್ಲು, ಅಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನಂಗೈ, ಅಸೈಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು, ಅಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಕಲ್ಕಟ್ಟ, ಅಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್, ಅಲ್‌ಹಾಜ್ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಖಾಝಿ ಕಾಸರಗೋಡು, ಅಸೈಯದ್ ಇಂಬಿಚ್ಚಿಕೋಯ ಜಮಾಲುಲ್ಲೈಲ್ ತಂಙಳ್ ಕಾಟುಕುಕ್ಕೆ, ಅಸೈಯದ್ ಶಿಹಾಬುದ್ದೀನ್ ತಂಙಳ್ ಕಿಲ್ಲೂರು, ಅಸೈಯದ್ ಮುಹಮ್ಮದ್ ಸುಹೈಲ್ ಅಸ್ಸಖಾಫ್ ತಂಙಳ್ ಮಡಕ್ಕರ, ಅಸೈಯದ್ ಮುಹಮ್ಮದ್ ಸುಹೈಲ್ ಅಸ್ಸಖಾಫ್ ತಂಙಳ್ ಮಡಕ್ಕರ, ಅಸೈಯದ್ ಇಬ್ರಾಹೀಂ ಬಾತಿಷ ತಂಙಳ್ ಆನೆಕಲ್, ಅಸೈಯದ್ ಅಬ್ದುರ್ರಹ್ಮಾನ್ ಶಹೀದ್ ತಂಙಳ್ ಕಡಲುಂಡಿ, ಉಳ್ಳಾಲ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಅಸೈಯದ್ ಶಿಹಾಬುದ್ದೀನ್ ಅಲ್‌ಬುಖಾರಿ ತಂಙಳ್ ಕಡಲುಂಡಿ, ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

 ಫೆ.28ರಂದು ರಾತ್ರಿ ಬುರ್ದಾ ಮಜ್ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಹಾಫಿಝ್ ಸ್ವಾದಿಕ್ ಅಲಿ ಅಲ್ ಫಾಳಿಲಿ ಗೂಡಲ್ಲೂರು ಮತ್ತು ಹಾಫಿಝ್ ಅನ್ವರಲಿ ಸಖಾಫಿ ಸಿರಿಯ ವಹಿಸಲಿದ್ದಾರೆ. ಮಾ.2ರಂದು ರಾತ್ರಿ 8ಕ್ಕೆ ತಾಜುಲ್ ಉಲಮಾ, ಶಿಹಾಬ್ ತಂಙಳ್, ಮಾಣಿಕ್ಕೋತ್ ಅಹ್ಮದ್ ಮುಸ್ಲಿಯಾರ್, ನೂರುಲ್ ಉಲಮಾ, ಪೊಸೋಟ್ ತಂಙಳ್‌ರ ಅನುಸ್ಮರಣೆ ನಡೆಯಲಿದೆ.

ಮಾ.4ರಂದು ರಾತ್ರಿ 8:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಖಾಝಿ ಶೈಖುನಾ ಎಂ. ಅಲಿಕುಂಞಿ ಉಸ್ತಾದ್ ವಹಿಸಲಿದ್ದಾರೆ. ಪೊಯ್ಯತ್ತಬೈಲ್‌ನ ಸಹ ಮುದರ್ರಿಸ್ ಅಬ್ದುಲ್ ಮಜೀದ್ ಫೈಝಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎನ್.ಕೆ.ಎಂ. ಶಾಫಿ ಸಅದಿ, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾ.5ರಂದು ವೌಲಿದ್ ಪಾರಾಯಣ ಹಾಗೂ ಅನ್ನದಾನ ಸಂತರ್ಪಣೆ ಜರಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೊಯ್ಯತ್ತಬೈಲ್ ಜಮಾಅತ್ ಹಾಗೂ ಉರೂಸ್ ಕಮಿಟಿಯ ಅಧ್ಯಕ್ಷ ವಿ. ಅಹ್ಮದ್ ಕುಂಞಿ, ಜಮಾಅತ್ ಕಮಿಟಿಯ ಉಪಾಧ್ಯಕ್ಷ ಅಬೂಬಕರ್ ಕ್ಯಾಂಪ್ಕೊ, ಕೋಶಾಧಿಕಾರಿ ಹಾಜಿ ಮುಹಮ್ಮದ್ ಅಸನಬೈಲ್, ಪ್ರಚಾರ ಸಮಿತಿಯ ಸಂಚಾಲಕ ಅಬ್ದುರ್ರಝಾಕ್ ಕೆ.ಕೆ., ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News