ಫೆ.19: ಸಾಮೂಹಿಕ ಯೋಗ ಪ್ರದರ್ಶನ

Update: 2017-02-15 11:58 GMT

ಮಂಗಳೂರು, ಫೆ.15: ಕೊಂಚಾಡಿ ಶ್ರೀ ರಾಮಾಶ್ರಮ ಶಾಲಾ ಹಳೆ ವಿದ್ಯಾರ್ಥಿ ಸಂಘ, ದೇಲಂಪಾಡಿ ಯೋಗ ಕೇಂದ್ರ, ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ಮಂಗಳಾದೇವಿ ಇವುಗಳ ಸಂಯುಕ್ತಾಶ್ರಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಶಿಷ್ಯರಿಂದ ಸಾಮೂಹಿಕ ಯೋಗ ಪ್ರದರ್ಶನವನ್ನು ಫೆ.19ರಿಂದ ಬೆಳಗ್ಗೆ 6:30ಕ್ಕೆ ಕೊಂಚಾಡಿ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರಗಲಿದೆ ಎಂದು ಅಶೋಕ್ ಕೊಂಚಾಡಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಲಂಪಾಡಿ ಯೋಗ ಕೇಂದ್ರದಿಂದ ತರಬೇತಿ ಪಡೆದು ಸಾಧನೆಗೈದ ಸಾಧಕರು, ಮಂಗಳೂರಿನಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಯೋಗ ಶಿಕ್ಷಕರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ತಹಶೀಲ್ದಾರ್ ಸಿ. ಮಹದೇವಯ್ಯ, ನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಮಾಜಿ ಮೇಯರ್ ಮಹಾಬಲ ಮಾರ್ಲ, ಕಾರ್ಪೊರೇಟರ್ ರಾಜೇಶ್ ಕೆ. ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯೋಗರತ್ನ ಗೋಪಾಲ ದೇಲಂಪಾಡಿ, ಶ್ಯಾಮ್‌ಪ್ರಸಾದ್, ಎಂ. ದೇವದಾಸ್, ಸಂತೋಷ್ ಕುಮಾರ್ ದಂಡಕೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News