×
Ad

ಬಹರೇನ್‌ನಲ್ಲಿ ಬಿಲ್ಲವ ಸಮಾಗಮ

Update: 2017-02-15 17:36 IST

ಉಡುಪಿ, ಫೆ.15: ಬಹರೇನ್ ಗುರು ಸೇವಾ ಸಮಿತಿ ಬಿಲ್ಲವಾಸ್ ಇದರ ವಾರ್ಷಿಕೋತ್ಸವದ ಅಂಗವಾಗಿ ಬಿಲ್ಲವ ಸಮಾಗಮ ಕಾರ್ಯಕ್ರಮವನ್ನು ಅದ್ಲಿಯದ ಶೇಕ್ ಇಸ ಬಿನ್ ಸಲ್ಮಾನ್ ಕಲ್ಚರಲ್ ಹಾಲ್ನಲ್ಲಿ ಆಯೋಜಿಸ ಲಾಗಿತ್ತು.

ಚಲನಚಿತ್ರ ನಟ, ನಿರ್ದೇಶಕ ಡಾ.ರಾಜಶೇಖರ್ ಕೋಟ್ಯಾನ್, ಜಿತೇಶ್ ಸುವರ್ಣ ಉಡುಪಿ, ತುಳುಕೂಟ ಪಿಂಪ್ರಿ ಚಿಂಚಿವಾಡ್ ಅಧ್ಯಕ್ಷ ಶ್ಯಾಮ್ ಸುವರ್ಣ ಮುಖ್ಯ ಅತಿಥಿಯಾಗಿದ್ದರು. ಬಹರೇನ್ ಬಿಲ್ಲವಾಸ್ ಅಧ್ಯಕ್ಷ ರಾಜಕುಮಾರ್ ಉಪಸ್ಥಿತರಿದ್ದರು.

ಮಸ್ಕಿರಿ ಕುಡ್ಲ ತಂಡದ ಹಾಸ್ಯ ನಾಟಕ, ಮುಲ್ಕಿ ಚಂದ್ರಶೇಖರ್ ಸುವರ್ಣ ನಿರ್ದೇಶನದ ‘ಬಿರುವೆರ ಬಿರ್ದ್’ ಪ್ರಹಸನ ಪ್ರದರ್ಶನಗೊಂಡಿತು. ಸೌದಿ ಬಿಲ್ಲವಾಸ್ ತಂಡದಿಂದ ನೃತ್ಯ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರಗಿತು. ಇದೇ ಸಂದರ್ಭದಲ್ಲಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಪಡುಮಲೆ ಪುತ್ತೂರು ಇದರ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿ ೆಯನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News