ಪೆರ್ಡೂರು: ಅನಂತ ನಾಟಕೋತ್ಸವ ಸಮಾರೋಪ
Update: 2017-02-15 17:48 IST
ಹಿರಿಯಡ್ಕ, ಫೆ.15: ಪೆರ್ಡೂರು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ‘ಅನಂತ’ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾ ರಂಭ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜು ಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ, ರಂಗನಿರ್ದೇಶಕ ಬಾಸುಮ ಕೊಡಗು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಎಚ್.ಜನಾರ್ದನ ಆಚಾರ್ಯ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರೌಢಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಆರ್.ಹೆಗ್ಡೆ, ಸಾಹಿತ್ಯ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ, ಭುವನಪ್ರಸಾದ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯ ಎಚ್.ಎಸ್.ಗಣೇಶ ಭಟ್ ಉಪಸ್ಥಿತರಿದ್ದರು.
ನಾಟಕೋತ್ಸವದ ಸಂಘಟಕ ಜಿ.ಪಿ.ಪ್ರಭಾಕರ ತುಮರಿ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ವಾತನಾಡಿದರು. ಶಿಕ್ಷಕ ಸತೀಶ ಕುಮಾರ್‌ಶೆಟ್ಟಿ ವಂದಿಸಿದರು. ಉಷಾರಾಣಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ತಂಡದಿಂದ ಮುದ್ರಾರಾಕ್ಷಸ ನಾಟಕ ಪ್ರದರ್ಶನಗೊಂಡಿತು.