ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಭೆ
Update: 2017-02-15 17:49 IST
ಉಡುಪಿ, ಫೆ.15: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯು ಇತ್ತೀಚೆಗೆ ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ರಾಜ್ಯ ಕಾರ್ಯಕಾರಿ ಸದಸ್ಯೆ ಸರಸು ಡಿ.ಬಂಗೇರ ಸಭೆಯನ್ನು ಉದ್ಘಾಟಿಸಿ ಮಹಿಳೆಯರು ರಾಜಕೀಯದಲ್ಲಿ ಇನ್ನಷ್ಟು ಸಕ್ರಿಯವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇಂದಿರಾ ಗಾಂಧಿಯವರ ನೆನಪನ್ನು ಜನಸಾಮಾನ್ಯರಲ್ಲಿ ಉಳಿಸಬೇಕು ಎಂದು ಹೇಳಿದರು.
ಇಂದಿರಾ ಗಾಂಧಿ ಜನ್ಮ ಶತಾಬ್ದಿ ವರ್ಷ ಆಚರಣೆ ಕುರಿತು ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ವಿಷಯ ಮಂಡಿಸಿದರು. ಸಭೆಯಲ್ಲಿ ಸುನಿತಾ ಶೆಟ್ಟಿ, ಗೋಪಿನಾಯ್ಕಿ, ಮಮತಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಸುಜಾತ ಆಚಾರ್ಯ, ಚಂದ್ರಕಾ ಕೇಳ್ಕರ್, ಸೌಮ್ಯ, ಸುಜಾತ ಸುವರ್ಣ, ಸುಲೋಚನ, ರಂಜನಿ ಹೆಗ್ಡೆ, ದಮಯಂತಿ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ರೋಶನಿ ಒಲಿವೆರರಾ ಸ್ವಾಗತಿಸಿದರು. ಜ್ಯೋತಿ ಹೆಬ್ಬಾರ್ ವಂದಿಸಿದರು.