ಪಂಪ್‌ವೆಲ್: ನಿರ್ಮಾಣ ಹಂತದ ಕಟ್ಟಡದಲ್ಲಿ 2 ಅಪರಿಚಿತ ಶವ ಪತ್ತೆ

Update: 2017-02-15 16:41 GMT

ಮಂಗಳೂರು, ಫೆ.15: ನಗರದ ಕಂಕನಾಡಿ-ಪಂಪ್‌ವೆಲ್ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸುಮಾರು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ವ್ಯಕ್ತಿಗಳ ಶವ ಶಂಕಾಸ್ಪದ ರೀತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

ಎರಡೂ ಶವಗಳು ಭಾಗಶ: ಕೊಳೆತಿದ್ದು, ಮೂರು ದಿನದ ಹಿಂದೆ ಸಾವಿಗೀಡಾಗಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಐದಾರು ವರ್ಷದಿಂದ ನಿರ್ಮಾಣ ಹಂತದ ಈ ಕಟ್ಟಡದ ಕಾಮಗಾರಿಯು ಇದೀಗ ಸ್ಥಗಿತಗೊಂಡಿದ್ದು, ಇದರ 6ನೆ ಮಹಡಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ.

ಇವರು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಯಾರೋ ಕೊಲೆಗೈದರೇ ಎಂಬುದು ಸ್ಪಷ್ಟಗೊಂಡಿಲ್ಲ. ಮೃತದೇಹಗಳ ಮೇಲೆ ಗಾಯಗಳು ಕಂಡು ಬಂದ ಕಾರಣ ಕೊಲೆಯಾಗಿರಬೇಕು ಎಂದು ಶಂಕಿಸಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಅಮಲು ಪದಾರ್ಥದ ಬಾಟಲಿಗಳು ಕಂಡು ಬಂದಿದೆ. ಒಂದೋ ಕುಡಿದ ಮತ್ತಿನಲ್ಲಿ ಪರಸ್ಪರ ಗಲಾಟೆ ಮಾಡಿ ಹತೈಗೈದಿರಬೇಕು ಅಥವಾ ತಂಡದಿಂದ ಈ ಕೃತ್ಯ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಎರಡೂ ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿದ್ದು, ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News