ಲಾರಿ - ಕಾರು ಢಿಕ್ಕಿ : ಓರ್ವ ಸಾವು
Update: 2017-02-15 19:11 IST
ಕಾಸರಗೋಡು,ಫೆ.15: ಲಾರಿ - ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಪಿಲಿಕ್ಕೋಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನೀಲೇಶ್ವರ ಪೂವಾಲಂನ ಸಂತೋಷ್ ಕುಮಾರ್ (38) ಮೃತಪಟ್ಟವರು.
ಕಾರಿನಲ್ಲಿದ್ದ ಪತ್ನಿಯ ಸಹೋದರ ಉಣ್ಣಿಕೃಷ್ಣನ್ (35) ಗಂಭೀರ ಗಾಯಗೊಂಡಿದ್ದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಇಬ್ಬರು ಪರಪ್ಪದಲ್ಲಿ ಹೊಸ ಸೂಪರ್ ಮಾರ್ಕೆಟ್ ಆರಂಭಿಸುವ ತಯಾರಿಯಲ್ಲಿದ್ದರು. ಈಸಂಬಂಧ ಕಾರಿನಲ್ಲಿ ಮಲಪ್ಪುರಂಗೆ ಹೋಗಿ ಹಿಂತಿರುಗುವ ದಾರಿಮಧ್ಯೆ ಈ ಅಪಘಾತ ನಡೆದಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.