ಪರೀಕ್ಷೆ ಬಗ್ಗೆ ಅತಿ ಆತಂಕ ಸಲ್ಲ: ಆರೂರು ತಿಮ್ಮಪ್ಪಶೆಟ್ಟಿ
ಹಿರಿಯಡ್ಕ, ಫೆ.15: ಪರೀಕ್ಷೆ ಎನ್ನುವುದು ಭೂತವಲ್ಲ. ಅದು ನಮ್ಮ ಕಲಿಕೆ ಯನ್ನು ದೃಢಪಡಿಕೊಳ್ಳುವ ಒಂದು ವಿಧಾನ. ಎಸ್ಸೆಸೆಲ್ಸಿ ಪರೀಕ್ಷೆ ಬಗ್ಗೆ ಕೂಡಾ ಅತಿ ಆತಂಕಿತರಾಗಿ ಓದಬೇಡಿ ಎಂದು ಬಾಲ ಅಕಾಡೆಮಿ ಸದಸ್ಯ, ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಪಂ, ಧಾರವಾಡದ ಬಾಲವಿಕಾಸ ಅಕಾಡೆಮಿ, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬ್ರಹ್ಮಾವರ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರ್ಡೂರು ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾಪೂರ್ವ ತಯಾರಿ ಕುರಿತ ವಿಶೇಷ ಸಂಪನ್ಮೂಲ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪೆರ್ಡೂರು ಜಿಪಂ ಸದಸ್ಯ ಮೈರ್ವಾಡಿ ಸುಧಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪೆರ್ಡೂರು ಗ್ರಾಪಂ ಅಧ್ಯಕ್ಷೆ ಶಾಂಭವಿ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಪೆರ್ಡೂರು ಗ್ರಾಪಂ ಉಪಾಧ್ಯಕ್ಷ ಸುರೇಶ ಸೇರ್ವೆಗಾರ, ಮುಖ್ಯೋಪಾಧ್ಯಾಯ ಎಚ್.ಎಸ್.ಗಣೇಶ ಭಟ್, ಶಿಶು ಅಭಿವೃದ್ಧಿ ಅಧಿ ಕಾರಿ ಎಚ್.ಎಸ್.ಜೋಗೇರ, ನಿವೃತ್ತ ಶಿಶು ಅಭಿವೃದ್ದಿ ಅಧಿಕಾರಿ ಸದಾನಂದ ನಾಯಕ್, ಮನೋವೈದ್ಯ ಡಾ.ಮಾನಸ್, ಗ್ರಾಪಂ ಸದಸ್ಯ ಲಲಿತಾಂಬಾ ಉಪಸ್ಥಿತರಿದ್ದರು.
ಕುಕ್ಕೆಹಳ್ಳಿ ವಲಯ ಅಂಗನವಾಡಿ ಮೇಲ್ವಿಚಾರಕಿ ವನಿತಾ ಹೆಗ್ಡೆ ಸ್ವಾಗತಿಸಿ ದರು. ಸುಖಲತಾ ಶೆಟ್ಟಿ ವಂದಿಸಿದರು. ಶಿಕ್ಷಕ ಜಿ.ಪಿ.ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು.