×
Ad

ಸಿಎಂ ಕುರ್ಚಿಗಾಗಿ ಸೆಲ್ವಂ -ಪಳನಿ ಫೈಟ್‌

Update: 2017-02-15 21:40 IST

ಚೆನ್ನೈ, ಫೆ.15: ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರನ್ನು ಉಸ್ತುವಾರಿ ಮುಖ್ಯ ಮಂತ್ರಿ ಓ. ಪನ್ನೀರ್‌ ಸೆಲ್ವಂ ಮತ್ತು ಶಶಿಕಲಾ ಬಣದ ನಾಯಕ ಎಡಪ್ಪಾಡಿ ಪಳನಿ ಸ್ವಾಮಿ ಭೇಟಿಯಾಗಿ ಸರಕಾರ ರಚನೆಗೆ ಅವಕಾಶ ನೀಡುವಂತೆ ಅಹವಾಲು ಮಂಡಿಸಿದರು.
ಪ್ರತ್ಯೇಕವಾಗಿ ಉಭಯ ನಾಯಕರುಗಳು ರಾಜ್ಯಪಾಲರನ್ನು ಭೇಟಿಯಾದರು.   ಪಳನಿ ಸ್ವಾಮಿ ಅವರು ತಮಗೆ ೧೨೪ ಶಾಸಕರ ಬೆಂಬಲ ಇದೆ ಎಂದು ರಾಜ್ಯಪಾಲರಿಗೆ ಪತ್ರ ನೀಡಿದರು. ಪನ್ನೀರ್‌ ಸೆಲ್ವಂ ಇದೇ ರೀತಿ ಪತ್ರ ನೀಡಿದ್ದಾರೆ. ಆದರೆ ರಾಜ್ಯಪಾಲರು ಯಾರಿಗೂ ಸರಕಾರ ರಚನೆಗೆ ಸಂಬಂಧಿಸಿ ಭರವಸೆ ನೀಡಿಲ್ಲ. ಗುರುವಾರ ಉಭಯ ನಾಯಕರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಜೈಲು ಪಾಲಾಗುತ್ತಿದ್ದಂತೆ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News