×
Ad

ಬೆಳ್ತಂಗಡಿ : ಎಸ್.ಎಸ್.ಎಲ್,ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

Update: 2017-02-15 22:30 IST

ಬೆಳ್ತಂಗಡಿ,ಫೆ.15: ಸರಕಾರಿ ಶಾಲೆಗಳಲ್ಲಿಯೂ ಇಂದು ಉತ್ತಮ ಶಿಕ್ಷಣ ದೊರಕುತ್ತಿದ್ದು ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಪೋಷಕರು ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಒಟ್ಟಾಗಿ ಶ್ರಮಿಸಿದರೆ ಉತ್ತಮ ಫಲಿತಾಂಶ ದೊರಕಲು ಸಾಧ್ಯ ಎಂದು ಬೆಳ್ತಂಗಡಿ ಶಾಸಕ ಕೆ ಸಂತ ಬಂಗೇರ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ಇಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಎಸ್.ಎಸ್.ಎಲ್,ಸಿ ವಿಧ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರೇರಣಾ ಶಿಬಿರ ಹಾಗೂ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಉದ್ದೇಶದೊಂದಿಗೆ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣದಬಗ್ಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂದರು.

ಈಲ್ಲಾ ವಿಧ್ಯಾಂಗ ಉಪನಿರ್ದೇಶಕ ವಾಲ್ಟರ್‌ಡಿಮೆಲ್ಲೋ ಮಾತನಾಡಿ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಇದು ಎಲ್ಲರ ಒಟ್ಟಾದ ಶ್ರಮದಿಂದ ಸಾಧ್ಯವಾಗಿದೆ. ಇನ್ನು ಪರೀಕ್ಷೆಗೆ ಉಳಿದ ದಿನಗಳ ಸದುಪಯೋಗವನ್ನು ವಿಧ್ಯಾರ್ಥಿಗಳು ಮಾಡಿಕೊಳ್ಳಬೇಕು ಸತತವಾದ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ದ.ಕ ಜಿಲ್ಲಾ ಪಂಚಯತಿನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡಿರುವುದರ ಉದ್ದೇಶ ವಿವರಿಸಿ ಅದರ ಸದುಪಯೋಗ ಎಲ್ಲರಿಗೂ ದೊರಕುವಂತಾಗಬೇಕು ಎಂದರು.

ಬೆಳ್ತಂಗಡಿ ಪಟ್ಟಣ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಜಿಲ್ಲಾ ಪಂಚಾಯತು ಸದಸ್ಯೆ ಮಮತಾ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿಅಧ್ಯಕ್ಷ ಸುಧೀರ್ ಸುವರ್ಣ, ಜಮ್ಯೀಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಅಬ್ಬೋನು ಮದ್ದಡ್ಕ, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಲತ್ತೀಫ್ ಸಾಹೇಬ್, ತಾ.ಪಂ ಸದಸ್ಯ ಗೋಪೀನಾಧ್ ನಾಯಕ್, ಜಯರಾಮ್, ಉಮ್ಮರ್ಕುಂಞಿ ನಾಡ್ಜೆ, ರಾಜಶೇಖರ ಅಜ್ರಿ, ಜಮದಯೀಯತುಲ್ ಫಲಾಹ್ ಜಿಲ್ಲಾ ಕಾರ್ಯದರ್ಶಿ ಜಮೀರ್ ಪಾಷಾ, ಕಾಸೀಂ ಪದ್ಮುಂಜ, ಎಂಎಸ್ ಕೋಯ, ರಾಜಗುರು ಹೆಬ್ಬಾರ್, ಶಿಕ್ಷಣ ಸಮನ್ವಯಾಧಿಕಾರಿ ಗಣೇಶ್, ಹಾಗೂ ಇತತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಪ್ರಶಸ್ತಿ ವಿಜೇತ ಗಣಿತ ಲೋಕದ ರೂವಾರಿ ನಡ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಇವರನ್ನು ಸನ್ಮಾನಿಸಲಾಯಿತು, ವಿಕಲಾಂಗ ವಿಧ್ಯಾರ್ಥಿ ವಾಸೀಂ ಅಕ್ರಂ ಅವರಿಗೆ ಜಮಯೀಯತುಲ್ ಫಲಾಹ್ ವತಿಯಿಂದ ನೀಡಿದ ತ್ರಿಚಕ್ರವಾಹನವನ್ನು ಶಾಸಕರು ಹಸ್ತಾಂತರಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು,ಸುಭಾಶ್ ಜಾಧವ್ ಕಾರ್ಯಕ್ರಮ ನಿರೂಪಿಸಿದರು, ರಮೇಶ್ ವಂದಿಸಿದರು, ಶಿಬಿರದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾವಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News