×
Ad

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ರಾಜ್ಯ ತಂಡ ಪ್ರಕಟ

Update: 2017-02-15 23:50 IST

ಮೂಡುಬಿದಿರೆ, ಫೆ.15: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ೆ.18ರಿಂದ 22ರವರೆಗೆ ನಡೆಯಲಿರುವ ಎಂ.ಕೆ.ಅನಂತರಾಜ್ ಸ್ಮಾರಕ 62ನೆ ರಾಷ್ಟ್ರೀಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ.

ಆಳ್ವಾಸ್ ಸಂಸ್ಥೆಯ ಕಿರಣ್‌ಕುಮಾರ್ ಬಿ.ಎನ್. ಹಾಗೂ ಕಾವ್ಯಾ ಎಂ.ಆರ್. ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಮುನ್ನಡೆಸಲಿದ್ದಾರೆ. ಬಾಲ್‌ಬ್ಯಾಡ್ಮಿಂಟನ್ ರಾಜ್ಯ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಹಾಗೂ ದ.ಕ. ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಲ್ಯಾಸ್ ನೇತೃತ್ವದಲ್ಲಿ ಆಯ್ಕೆ ಸಮಿತಿಯಿಂದ ತಂಡವನ್ನು ಆರಿಸಲಾಯಿತು.

ಪುರುಷರ ತಂಡ: ಕಿರಣ್ ಕುಮಾರ್ ಬಿ.ಎನ್. (ನಾಯಕ), ವಿಜಯ ಕುಮಾರ್, ವಾರಿ, ಗೋಪಾಲ್, ಉಲ್ಲಾಸ್ ಎನ್.ವಿ., ರಂಜಿತ್ ಎಚ್.ಎಂ, ಮಹದೇವ ಸ್ವಾಮಿ, ಮನೀಶ್ ಕುಮಾರ್, ವೀರೇಂದ್ರ ಪಾಟೀಲ್ ಹಾಗೂ ಶ್ರೀನಿವಾಸ್. ತರಬೇತು ದಾರರಾಗಿ ಜಿ.ಬಿ. ನಾಗರಾಜ್, ತಂಡದ ವ್ಯವಸ್ಥಾಪಕರಾಗಿ ಮುಹಮ್ಮದ್ ಇಲ್ಯಾಸ್ ಆಯ್ಕೆಯಾಗಿದ್ದಾರೆ. *ಮಹಿಳೆಯರ ತಂಡ: ಕಾವ್ಯಾ ಎಂ. ಆರ್. (ನಾಯಕಿ), ರಂಜಿತಾ ಎಂ.ಪಿ., ಯಶಸ್ವಿನಿ ಕೆ.ಜಿ., ಜಯಲಕ್ಷ್ಮೀ, ಲಾವಣ್ಯಾ ಬಿ.ಡಿ., ಸಂಗೀತ, ಸುಶ್ಮಿತಾ ಎಂ., ಪಲ್ಲವಿ ಎಸ್.ಕೆ, ಸುಶ್ಮಿತಾ ಡಿ.ಎಸ್., ಹಾಗೂ ಲತಾ.. ತರಬೇತುದಾರರಾಗಿ ಪ್ರವೀಣ್ ಕುಮಾರ್, ವ್ಯವಸ್ಥಾಪಕರಾಗಿ ರಶ್ಮಿ ಜಿ. ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News