×
Ad

​ಪಳನಿಸ್ವಾಮಿಗೆ ರಾಜ್ಯಪಾಲರಿಂದ ಆಹ್ವಾನ

Update: 2017-02-16 11:22 IST

ಚೆನ್ನೈ, ಫೆ.16: ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖಂಡ ಎಡಪ್ಪಾಡಿ ಕೆ.ಪಳನಿಸ್ವಾಮಿಯವರನ್ನು ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗಾರ್ ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಳನಿಸ್ವಾಮಿ 11:30ರ ಸುಮಾರಿಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ಪಕ್ಷದ 10 ಮಂದಿ ಶಾಸಕರೊಂದಿಗೆ ರಾಜಭವನಕ್ಕೆ ಆಗಮಿಸುವಂತೆ ಪಳನಿಸ್ವಾಮಿಯವರನ್ನು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಅದರಂತೆ ಪಳನಿಸ್ವಾಮಿ ಪಕ್ಷದ ಶಾಸಕರಾದ ಸಂಗೊಟ್ಟೆಯಾನೆ ತಂಗಮಣಿ, ವೇಲುಮಣಿ, ದಿಂಡಿಗಲ್ ಶ್ರಿನೀವಾಸನ್ ಸೇರಿದಂತೆ 10 ಮಂದಿಯೊಂದಿಗೆ ರಾಜಭವನತದತ್ತ ಪಯಣ ಬೆಳೆಸಿದ್ದಾರೆ.

ಈ ದಿಢೀರ್ ಬೆಳವಣಿಗೆ ಎಐಎಡಿಎಂಕೆ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News