×
Ad

ಉವೈಸಿ ಬಿಜೆಪಿಯ ಏಜೆಂಟ್: ಗುಲಾಂ ನಬಿ ಆಝಾದ್

Update: 2017-02-16 12:28 IST

 ಕಾನ್‌ಪುರ,ಫೆ. 16: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಬಿಜೆಪಿ ಏಜೆಂಟ್ ಎಂದು ಹೇಳಿದ್ದಾರೆ. ಮುಸ್ಲಿಮರ ಕಲ್ಯಾಣದ ಬಗ್ಗೆ ಉವೈಸಿಗೆ ಕಿಂಚಿತ್ತೂ ಆಸಕ್ತಿಯಿಲ್ಲ ಬಿಜೆಪಿಯಿಂದ ಹಣ ಸ್ವೀಕರಿಸಿ ಮುಸ್ಲಿಮರ ಓಟನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಕಾನ್‌ಪುರದಲ್ಲಿ ಸಮಾಜವಾದಿ ಪಾರ್ಟಿ ಚುನಾವಣೆ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಹತ್ತಿರ ಉವೈಸಿಯ ಸಭೆಯು ನಡೆಯುತ್ತಿತ್ತು. ಸಮಾಜವಾದಿ ಪಾರ್ಟಿ ಸಭೆಗೆ ಆಗಮಿಸಿದ ಆಝಾದ್ ಉವೈಸಿಯ ವಿರುದ್ಧ ಟೀಕಾಪ್ರಹಾರ ಹರಿಸಿ ಉವೈಸಿ ಹೈದರಾಬಾದ್‌ನ ಮುಸ್ಲಿಮರಿಗೆ ಏನೂ ಮಾಡಿಲ್ಲ ಎಂದರು.

ಉವೈಸಿ ಮುಸ್ಲಿಮರನ್ನು ಪ್ರಚೋದಿಸಿ ವೋಟು ಕೇಳುತ್ತಾರೆ ಮತ್ತು ಗೆದ್ದಿದ್ದಾರೆ. ಆದರೆ ಮುಸ್ಲಿಮರಿಗೆ ಅವರು ಏನೂ ಮಾಡಿಲ್ಲ. ಬಿಜೆಪಿ ಏಜೆಂಟ್ ಅವರು.ಇಲ್ಲಿ ಮುಸ್ಲಿಮರನ್ನು ಪ್ರಚೋದಿಸಿ ವೋಟನ್ನು ವಿಭಜಿಸುವ ಕೆಲಸಕ್ಕಿಳಿದಿದ್ದಾರೆ. ಇದಕ್ಕಾಗಿ ಉವೈಸಿ ಬಿಜೆಪಿಯಿಂದ ಕೋಟ್ಯಂತರ ರೂಪಾಯಿ ಕಪ್ಪ ಪಡೆದಿದ್ದಾರೆ ಎಂದು ಗುಲಾಮ್ ನಬಿ ಆಝಾದ್ ಹೇಳಿದರು. ಉವೈಸಿ ಬಿಹಾರಿ ಮುಸ್ಲಿಮರನ್ನು ಪುಸಲಾಯಿಸಿ ಮತ ವಿಭಜಿಸಲು ನೋಡಿದರು. ಆದರೆ ಅದರಲ್ಲಿ ಅವರು ಯಶಸ್ಸು ಪಡೆಯಲಿಲ್ಲ. ಈಗ ಉತ್ತರಪ್ರದೇಶಕ್ಕೆ ಬಂದಿದ್ದಾರೆ. ಬಿಜೆಪಿ ಇಲ್ಲಿ ಗೆಲ್ಲುವುದು ಬೇಕಾಗಿದೆ ಎಂದು ಆಝಾದ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News