×
Ad

ಎಸ್ ಬಿಐ ಜೊತೆ ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸರಕಾರ ಅಸ್ತು

Update: 2017-02-16 15:01 IST

ಹೊಸದಿಲ್ಲಿ,ಫೆ.16:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಅದರ ಇತರ ಐದು ಸಹವರ್ತಿ  ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸರಕಾರ  ಗುರುವಾರ ಒಪ್ಪಿಗೆ ನೀಡಿದೆ. 

ಕೇಂದ್ರ ಸಂಪುಟ ಈ ಮುನ್ನ ವಿಲೀನ ಪ್ರಸ್ತಾಪಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಬ್ಯಾಂಕಿನ ಅನೇಕ ಮಂಡಳಿಗಳು ಮಾಡಿರುವ ಶಿಫಾರಸುಗಳನ್ನು  ಪರಿಶೀಲಿಸಿ  ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.  ಆದರೆ ಭಾರತೀಯ ಮಹಿಳಾ ಬ್ಯಾಂಕಿನ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಎಸ್ ಬಿಐ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ(ಎಸ್ ಬಿಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ ಬಿಎಂ)  ಬ್ಯಾಂಕ್ ಆಫ್ ಟ್ರಾವಂಕೂರು(ಎಸ್ ಬಿಟಿ), ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ(ಎಸ್ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್ ಬಿಐ)  ಬ್ಯಾಂಕ್‌ಗಳು ವಿಲೀನಗೊಳ್ಳಲಿದೆ.
ವಿಲೀನ ಪ್ರಕ್ರಿಯೆಪೂರ್ಣಗೊಂಡರೆ ಎಸ್ ಬಿಐ ಜಾಗತಿಕ ಮಟ್ಟದಲ್ಲಿ  ಅತಿ ದೊಡ್ಡ ಬ್ಯಾಂಕು ಎನಿಸಿಕೊಳ್ಳಲಿದೆ.  ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News