ಕ್ಯಾಬಿನ್ ಬ್ಯಾಗೇಜಿನಲ್ಲಿ ಭಾರ ದಾಟಿಸುವ ಚತುರರೇ , ಇಲ್ಲಿದೆ ನಿಮಗೆ ಬ್ಯಾಡ್ ನ್ಯೂಸ್ !
ಹೊಸದಿಲ್ಲಿ,ಫೆ.16 :ವಿಮಾನ ಪ್ರಯಾಣಿಕರ ಕ್ಯಾಬಿನ್ ಬ್ಯಾಗೇಜ್ ಗಳ ತೂಕವು 7 ಕೆಜಿಗಿಂತ ಕಡಿಮೆಯಿದ್ದರೂ, ಅವರು ಹಲವಾರು ಬ್ಯಾಗುಗಳನ್ನು ಹೀಗೆ ಹೊಂದಿದ್ದರೆ, ಅವುಗಳನ್ನೆಲ್ಲಾ ಪ್ರತಿಯೊಬ್ಬ ವಿಮಾನ ಪ್ರಯಾಣಿಕ ತನ್ನೊಂದಿಗೆ ವಿಮಾನದೊಳಗೆ ಕೊಂಡು ಹೋಗಬಹುದಾದ ಬ್ಯಾಗುಗಳ ವಿಚಾರದಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಹೇಳಿದೆ.
‘‘ಪ್ರಯಾಣಿಕರ ಬಳಿ ಹಲವಾರು ಬ್ಯಾಗುಗಳಿದ್ದರೆ ಅವುಗಳನ್ನು ತಪಾಸಿಸಿ ಅವರನ್ನು ಒಳಕ್ಕೆ ಬಿಡಲು ಹೆಚ್ಚಿನ ಸಮಯ ತಗಲುತ್ತದೆ’’ಎಂದು ಸಿಐಎಸ್‌ಎಫ್ಮಹಾ ನಿರ್ದೇಶಕ ಒ ಪಿ ಸಿಂಗ್ ವಿಮಾನ ಯಾನ ಸಂಸ್ಥೆ ಪ್ರತಿನಿಧಿಗಳ ಜತೆ ನಡೆಸಿದ ಸಭೆಯ ನಂತರ ಹೇಳಿದ್ದಾರೆ.
ನಿಯಮದ ಪ್ರಕಾರ ಪ್ರತಿಯೊಬ್ಬ ಪ್ರಯಾಣಿಕ 7 ಕೆಜಿ ತನಕದ ತೂಕದ ಒಂದು ಕ್ಯಾಬಿನ್ ಬ್ಯಾಗ್ (25 x 35 x55ಸೆ.ಮೀ) ಒಯ್ಯಬಹುದಾಗಿದೆ. ಇದರ ಹೊರತಾಗಿ ಒಂದು ಪರ್ಸ್ ಅಥವಾ ಲ್ಯಾಪ್ ಟಾಪ್ ಬ್ಯಾಗ್ ಕೂಡ ಕೊಂಡೊಯ್ಯಬಹುದಾಗಿದೆ. ಆದರೆ ವಿಮಾನ ಪ್ರಯಾಣಿಕರು ಹೆಚ್ಚು ಬ್ಯಾಗುಗಳನ್ನು ಕೊಂಡೊಯ್ಯುತ್ತಿರುವುದುಗಮನಕ್ಕೆ ಬಂದಿದೆ, ಎಂದು ಅಧಿಕಾರಿಗಳು ಹೇಳುತ್ತಾರೆ.
ವಿಮಾನ ನಿಲ್ದಾಣದ ಎಕ್ಸ್-ರೇ ಮೆಶೀನು ಗಂಟೆಗೆ 300 ಬ್ಯಾಗುಗಳನ್ನು ಪರಿಶೀಲಿಸುತ್ತದೆ. ಆದರೆ ಪ್ರಯಾಣಿಕರು ಪರ್ಸ್ ಹಾಗೂ ಲ್ಯಾಪ್ ಟಾಪ್ ಬ್ಯಾಗ್ ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಬ್ಯಾಗ್ ಹೊಂದಿದ್ದರೆ ಹೆಚ್ಚಿನ ಸಮಯತಗಲುತ್ತದೆ. ಸಾಮಾನ್ಯವಾಗಿ ಒಂದು ಪ್ರಯಾಣಿಕನ ಬ್ಯಾಗ್ ಪರಿಶೀಲಿಸಲು 20 ಸೆಕೆಂಡುಗಳು ಬೇಕಾಗಿದ್ದರೆ, ಹೆಚ್ಚಿನ ಬ್ಯಾಗುಗಳಿರುವುದರಿಂದ ಪ್ರತಿಯೊಬ್ಬ ಪ್ರಯಾಣಿಕನಿಗಾಗಿ ಕೇವಲ 5ರಿಂದ 7 ಸೆಕೆಂಡು ಮಾತ್ರ ವಿನಿಯೋಗಿಸಬಹುದಾಗಿದೆ,’’ ಎಂದು ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘‘ವಿಮಾನಯಾನ ಸಂಸ್ಥೆಗಳು7 ಕೆಜಿ ತೂಕದ ಬ್ಯಾಗುಗಳನ್ನು ಕ್ಯಾಬಿನ್ನಿನೊಳಗೆ ಅನುಮತಿಸಿದರೂ ಹೆಚ್ಚಿನ ಬ್ಯಾಗುಗಳಿಗೆ ಶುಲ್ಕ ವಿಧಿಸುತ್ತಿಲ್ಲ ಬದಲಾಗಿ ಹೆಚ್ಚುವರಿ ತೂಕವಿದ್ದರೆ ಮಾತ್ರ ಶುಲ್ಕ ವಿಧಿಸುತ್ತದೆ. ಆದುದರಿಂದ ಬ್ಯಾಗೇಜು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ’’ ಎಂದು ಅವರು ತಿಳಿಸುತ್ತಾರೆ.