ಪಾರ್ಲಿಮೆಂಟ್ ಪೊಲೀಸ್ ಠಾಣೆಯ ಎದುರೇ ಕೇರಳ ಸಂಸದರ ಮೊಬೈಲ್ ಕಳ್ಳತನ
ಹೊಸದಿಲ್ಲಿ.ಫೆ. 16: ಕೇರಳದ ಅಟ್ಟಿಂಗಲ್ ಸಂಸದ ಎಂ ಸಂಪತ್‌ರ ಮೊಬೈಲ್ ಫೋನ್ಅನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆಯೇ ಕಳ್ಳರು ಎಗರಿಸಿದ್ದಾರೆ. ಜೆನ್‌ಯು ಪ್ರತಿಭಟಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರ ಮೊಬೈಲ್ ಫೋನ್ಅನ್ನು ಕಳ್ಳರು ಕದ್ದಿದ್ದಾರೆ. ಜೆನ್‌ಯು ವಿದ್ಯಾರ್ಥಿ ಯೂನಿಯನ್, ಜೆಎನ್‌ಯು ಟೀಚರ್ಸ್ ಅಸೋಸಿಯೇಶನ್ ಜಂಟಿಯಾಗಿ ಏರ್ಪಡಿಸಿದ ಪಾರ್ಲಿಮೆಂಟ್ ಮಾರ್ಚ್‌ನಲ್ಲಿ ಭಾಷಣ ನೀಡಲು ಅವರು ಹೋಗಿದ್ದರು.
ನಿನ್ನೆ ಸಂಜೆ ಅವರ ಭಾಷಣವಿತ್ತು. ಅದು ಮುಗಿದ ಬಳಿಕ ಅವರ ಜೇಬಿನಲ್ಲಿದ್ದ ಮೊಬೈಲ್ ಕಣ್ಮರೆಯಾಗಿತ್ತು. ಕಿಸೆಗಳ್ಳರು ತಮ್ಮ ಪ್ರತಾಪವನ್ನು ತೋರಿಸಿದ್ದರು. ಕೂಡಲೇ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದರು. ಸಾಮ್ಸ್ಯಂಗ್ ಜೆ.7 ಮೊಬೈಲ್ ಫೋನ್ ಕಿಸೆಗಳ್ಳರ ಕೈಸೇರಿದೆ.
ಸಂಪತ್ ವಾಸವಿರುವ ಅಶೋಕ್ ರೋಡ್ 44ನೆ ಸಂಖ್ಯೆ ವಸತಿಯಲ್ಲಿ ಕಳೆದ ಎರಡು ವರ್ಷಗಳ ನಡುವೆ ಹಲವು ಸಲ ಕಳ್ಳ ತನ್ನ ನಡೆದಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತರಾಂ ಯಚೂರಿಯ ಚಾಲಕರ ಮೊಬೈಲ್ ಫೋನ್ ಇಲ್ಲಿಯೇ ಕಳ್ಳತನವಾಗಿತ್ತು. 2015 ಜುಲೈಯಲ್ಲಿಸಿಪಿಎಂ ಮುಖವಾಣಿ ಪ್ರಜಾಶಕ್ತಿಯ ವರದಿಗಾರ ಜಗದೀಶ್ವರ್ ರಾವ್‌ರ ಮೊಬೈಲ್ ಕದಿಯುವ ಯತ್ನ ಇಲ್ಲಿಯೇ ಆಗಿತ್ತು. 2016ರ ಜನವರಿ 21ಕ್ಕೆ ಸಂಪತ್‌ರ ಕೋಣೆಯಲ್ಲಿನ ಲ್ಯಾಪ್‌ಟಾಪ್, ಮೊಬೈಲ್ ಕದಿಯುವ ಪ್ರಯತ್ನ ಆಗಿತ್ತು. ಎಪ್ರಿಲ್ 19ಕ್ಕೆ ಕಳ್ಳ ಮತ್ತೆ ಕದಿಯಲು ಬಂದಾಗ ಸಂಪತ್‌ರ ಕಾರ್ಯದರ್ಶಿ ಶ್ರೀಜಿತ್ ಕೈಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣಗಳು ಕೋರ್ಟಿನಲ್ಲಿ ನಡೆಯುತ್ತಿರುವಾಗಲೇ ಪಾರ್ಲಿಮೆಂಟ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಂಪತ್ ಮೊಬೈಲ್‌ನ್ನು ಕಿಸೆಗಳ್ಳರು ಕೈವಶಮಾಡಿಕೊಂಡಿದ್ದಾರೆಂದು ವರದಿ ತಿಳಿಸಿದೆ..