ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಚಿತ್ರೀಕರಣ, ಓರ್ವನ ಬಂಧನ
Update: 2017-02-16 16:52 IST
ಸುಳ್ಯ, ಫೆ.16: ನಗರದ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಚಿತ್ರೀಕರಣ ನಡೆಸುತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತನನ್ನು ಕಾಸರಗೋಡು ನಿವಾಸಿ ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ. ಈತ ನಗರದ ಗಾಂಧಿನಗರದ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಮಧ್ಯಾಹ್ನದ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಶೌಚಾಲಯಕ್ಕೆಂದು ಹೋದಾಗ ಈತ ಕಾಲೇಜು ಮಹಡಿ ಏರಿ ಒಳಗಿದ್ದ ಕೊಠಡಿಯೊಂದರ ಕಿಂಡಿಯಿಂದ ಚಿತ್ರೀಕರಣ ನಡೆಸುತಿದ್ದ ಎನ್ನಲಾಗಿದೆ.