ಅಕ್ರಮ 5 ಕೆಜಿ ಗಾಂಜಾ ಪತ್ತೆ: ಇಬ್ಬರ ಬಂಧನ
Update: 2017-02-16 17:32 IST
ಮಂಗಳೂರು, ಫೆ.16: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕಾಫಿಕಾಡ್ ರಸ್ತೆಯ ಬಳಿ ಬಂಧಿಸಿರುವ ಘಟನೆ ವರದಿಯಾಗಿದೆ.
ಬಂಧಿತರಾದವರನ್ನು ಬಂಟ್ವಾಳದ ಅಬ್ದುಲ್ ಅಂಸಾದ್ ಸಿ ಎಚ್ (27), ಕಾಸರಗೋಡಿನ ಉದಯ ಕುಮಾರ್ ರೈ, (30) ಎಂದು ಗುರುತಿಸಲಾಗಿದೆ. ಬಂಧಿತರಿಂದ 5 ಕೆಜಿ ಗಾಂಜಾ ಮತ್ತು 3 ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.
ಇವರು ಕೇರಳದ ಇಡುಕ್ಕಿ ಜಿಲ್ಲೆಯಿಂದ ಗಾಂಜಾ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ.