ಮೂಡುಬಿದಿರೆ: "ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ" ಕಾರ್ಯಕ್ರಮ ಉದ್ಘಾಟನೆ

Update: 2017-02-16 12:46 GMT

ಮೂಡುಬಿದಿರೆ, ಫೆ.16: ಕರ್ನಾಟಕ ಬಾಲವಿಕಾಸ ಅಕಾಡಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ., ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ.,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ "ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ" ಹೋಬಳಿ ಮಟ್ಟದ ಕಾರ್ಯಕ್ರಮವು ಗುರುವಾರ ಹೋಲಿ ರೋಝರಿ ಪ್ರೌಢಶಾಲೆಯಲ್ಲಿ ಜರುಗಿತು.

ಪುರಸಭಾ ಸದಸ್ಯ ಪ್ರಸಾದ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.ಮೂಡಾ ಅಧ್ಯಕ್ಷ ಸುರೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ, ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ., ಹೋಲಿ ರೋಝರಿ ಪ್ರೌಢಶಾಲೆಯ ಪ್ರಾಂಶುಪಾಲೆ ಸಿ.ನವೀನ, ದೈಹಿಕ ಪರಿವೀಕ್ಷಕ ಶಿವಾನಂದ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಳುವಾಯಿ ಎಸ್.ಎಂ.ಪಿ. ಪ್ರೌಢಶಾಲೆಯ ಪುರುಷೋತ್ತಮ ರಾವ್ (ಗಣಿತ ವಿಷಯ); ಅಳಿಯೂರು ಸರಕಾರಿ ಪ್ರೌಢಶಾಲೆಯ ಸುಬ್ರಹ್ಮಣ್ಯ ವಿ.(ವಿಜ್ಞಾನ); ಜೈನ ಪ್ರೌಢಶಾಲೆಯ ಮಹಾದೇವಿ(ಇಂಗ್ಲೀಷ್); ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಗುರುಮೂರ್ತಿ (ಸಮಾಜ) ಭಾಗವಹಿಸಿದ್ದರು.

ಅಧ್ಯಾಪಕ ರಾಮಕೃಷ್ಣ ಶಿರೂರು ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಿತೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News