ವೃತ್ತಿಪರ ಕ್ರೀಡಾಕೂಟ: 100 ಮೀಟರ್ ಓಟದಲ್ಲಿ ದೀಪಾ ಪ್ರಥಮ ಸ್ಥಾನ

Update: 2017-02-16 14:16 GMT

ಮಂಗಳೂರು, ಫೆ.16: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯ ವತಿಯಿಂದ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯಿಂದ ಭಾಗವಹಿಸಿದ ಕ್ರೀಡಾಪಟುಗಳಲ್ಲಿ ಮಹಿಳಾ ವಿಭಾಗದಲ್ಲಿ ಮಂಗಳೂರು ವಿಭಾಗದ ದೀಪಾ ಅವರು 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಂಗಳೂರು ಘಟಕದ ದೀಪಾ, ಸುಮಿತ್ರಾ ಮತ್ತು ಬಂಟ್ವಾಳ ಘಟಕದ ದೀಕ್ಷಾ, ಸುಬ್ರಹ್ಮಣ್ಯ ಘಟಕ ದ ನೇತ್ರಾವತಿ ಅವರು ರಿಲೇ ತಂಡದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಬಡ್ಡಿ ಭಾಗದಲ್ಲಿ ಕಡಬ ಘಟಕದ ಸುರೇಶ್ ತಂಡದವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಮಂಗಳೂರು, ಉಡುಪಿ, ಕಾರವಾರ, ಚಿಕ್ಕಮಂಗಳೂರು ಎಂಬ ನಾಲ್ಕು ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯದ ಗೃಹರಕ್ಷಕರು ಹಲವಾರು ಪದಕಗಳನ್ನು ಪಡೆದಿದ್ದಾರೆ.

ಕಾರವಾರ ಜಿಲ್ಲೆಯ ನಾಗರಾಜು ಅವರು ಪುರುಷರ 100 ಮೀ. ಓಟದಲ್ಲಿ ಪ್ರಥಮ, ರಿಲೆಯಲ್ಲಿ ದ್ವಿತೀಯ, 800 ಮೀ.ನಲ್ಲಿ ದ್ವಿತೀಯ, ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಪುರುಷರ ಱವೈಯಕ್ತಿಕ ಚಾಂಪಿಯನ್‌ೞಆಗಿದ್ದಾರೆ.

ಮಂಗಳೂರು 15, ಉಡುಪಿ 6, ಕಾರವಾರದ 15, ಚಿಕ್ಕಮಂಗಳೂರಿನ 14 ಮಂದಿ ಗೃಹರಕ್ಷಕರು (ಒಟ್ಟು 50 ಮಂದಿ) ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದು, ಪುರುಷರ ವಾಲಿಬಾಲ್‌ನಲ್ಲಿಯೂ ಕಾರವಾರದ ಗೃಹರಕ್ಷಕ ತಂಡ ದ್ವಿತೀಯ ಸ್ಥಾನ ಗಳಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News