×
Ad

ಭಟ್ಕಳ: ಶಮ್ಸುದ್ದೀನ್ ವೃತ್ತದಲ್ಲಿ ಅಪಘಾತ, ಓರ್ವ ಸಾವು

Update: 2017-02-16 19:57 IST

ಭಟ್ಕಳ, ಫೆ.16: ನಗರದ ಹೃದಯ ಭಾಗವಾಗಿರುವ ಶಮ್ಸದ್ದೀನ್ ವೃತ್ತದ ಬಳಿ ಗುರುವಾರ ಜರಗಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನವಾಯತ್ ಕಾಲೋನಿಯ ಅಮೀನುದ್ದೀನ್ ರಸ್ತೆ ನಿವಾಸಿ ಅಬ್ದುಲ್ ವದೂದ್ ಮಾಣಿ(50) ಎಂದು ಗುರುತಿಸಲಾಗಿದೆ.
ಇವರು ಸಾಗರ ರಸ್ತೆಯಿಂದ ನವಾಯತ್ ಕಾಲೋನಿಯಡೆಗೆ ತಮ್ಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಶಮ್ಸುದ್ದೀನ್ ವೃತ್ತದ ಬಳಿ ತಿರುವಿನಲ್ಲಿ ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಕರಣ ನಗರಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News