ಫೆ.17ರಂದು ಮಕ್ಕಳ ಹಬ್ಬ
Update: 2017-02-16 20:11 IST
ಮಂಗಳೂರು, ಫೆ.16: ಕರ್ನಾಟಕ ಬಾಲ ವಿಕಾಸ ಅಕಾಡಮಿ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿ ಕಾಸ ಅಕಾಡಮಿ ಜಿಲ್ಲಾ ಕಾರ್ಯಾನುಷ್ಠಾನ ಸಮಿತಿ ಡಾ. ಶಿವರಾಮ ಕಾರಂತ ಬಾಲವನ, ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ. 17 ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಮಕ್ಕಳ ಹಬ್ಬ ನಡೆಯಲಿದೆ.
ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.