ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್‌ನಿಂದ ಟಾಪ್-7 ಲೀಡರ್ಸ್ ಮೀಟ್
Update: 2017-02-16 20:27 IST
ಉಳ್ಳಾಲ: ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ 09 ಶಾಖೆಗಳ ಟಾಪ್-7 ಲೀಡರ್ಸ್ ಮೀಟ್ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷ ರಹೀಂ ಝುಹ್‌ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಪೂಮಣ್ಣ್ ಮದರಸದಲ್ಲಿ ಇತ್ತೀಚೆಗೆ ನಡೆಯಿತು.
ಮುಡಿಪು ಸೌತ್ ಸೆಕ್ಟರ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಿಮಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸಂಘಟನಾ ತರಗತಿಯನ್ನು ನಡೆಸಿದರು.
ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಅಝೀರ್ ಸಖಾಫಿ, ತಲಪಾಡಿ ಸೆಕ್ಟರ್ ನಿಕಟಪೂರ್ವ ಅಧ್ಯಕ್ಷ ಹಕೀಂ ಪೂಮಣ್ಣ್, ನಿಕಟಪೂರ್ವ ಕೋಶಾಧಿಕಾರಿ ಇಕ್ಬಾಲ್, ಡಿವಿಷನ್ ಕಾರ್ಯದರ್ಶಿ ಶಿಹಾಬುದ್ದೀನ್ ಕೆ.ಸಿ ರೋಡ್ ಉಪಸ್ಥಿತರಿದ್ದರು. ಡಿವಿಷನ್ ಕೋಶಾಧಿಕಾರಿ ಹಮೀದ್ ತಲಪಾಡಿ ಸ್ವಾಗತಿಸಿ, ವಂದಿಸಿದರು.