ಪಾಪ್ಯುಲರ್ ಫ್ರಂಟ್ ಐಕ್ಯತಾ ರ್ಯಾಲಿ ಮಂಗಳೂರಿಗೆ ಸ್ಥಳಾಂತರ
Update: 2017-02-16 20:41 IST
ಮಂಗಳೂರು, ಫೆ.16: ಫೆ.17ರಂದು ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಐಕ್ಯತಾ ರ್ಯಾಲಿ ಮಂಗಳೂರಿಗೆ ಸ್ಥಳಾಂತರವಾಗಿದೆ.
ಉಳ್ಳಾಲದ ಮೈದಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಇದಾಗಿತ್ತು. ಆದರೆ ಕಾರ್ಯಕ್ರಮದ ನಿರಾಕರಿಸಿ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿತ್ತು.
ನಂತರ ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಧ್ಯಾಹ್ನ 2:30ರಿಂದ 5:30ರ ತನಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.